ADVERTISEMENT

‘ಕೆಇಸಿ ಕಂಪನಿ ಕಪ್ಪುಪಟ್ಟಿಯಲ್ಲಿಲ್ಲ’

ಕೆಪಿಟಿಸಿಎಲ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:06 IST
Last Updated 13 ಜೂನ್ 2019, 19:06 IST

ಬೆಂಗಳೂರು:ವಿದ್ಯುತ್ ಸರಬರಾಜು ಗುತ್ತಿಗೆ ನೀಡಿರುವ ‘ಕೆಇಸಿ ಇಂಟರ್‌ನ್ಯಾಷನ್ ಲಿಮಿಟೆಡ್’ ಕಂಪನಿ ಕಪ್ಪುಪಟ್ಟಿಗೆ ಸೇರಿಲ್ಲ ಎಂದು ಕೆಪಿಟಿಸಿಎಲ್‌ ಸ್ಪಷ್ಟಪಡಿಸಿದೆ.

‘ಪ್ರಜಾವಾಣಿ’ಯ ಜೂನ್‌ 13ರ ಸಂಚಿಕೆಯಲ್ಲಿ ಪ್ರಕಟವಾಗಿರುವ ‘ಕಪ್ಪು ಪಟ್ಟಿಯಲ್ಲಿದ್ದ ಸಂಸ್ಥೆಗೆ ಗುತ್ತಿಗೆ: ಪ್ರಶ್ನಿಸಿದ ಅಧಿಕಾರಿ ಎತ್ತಂಗಡಿ?’ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕೆಪಿಟಿಸಿಎಲ್‌, ‘ಮಧ್ಯಪ್ರದೇಶ ವಿದ್ಯುತ್‌ ವಿತರಣೆ ಕಂಪನಿ ಕೆಇಸಿ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಕಂಪನಿಯನ್ನು 2013ರ ಅಕ್ಟೋಬರ್‌ 23ರಿಂದ ಮೂರು ವರ್ಷಗಳವರೆಗೆ ತನ್ನ ಇತರ ಯಾವುದೇ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿ ಆದೇಶಿಸಿತ್ತು. ಆದರೆ, ಜಬಲ್‌ಪುರ ಹೈಕೋರ್ಟ್‌ ಈ ಆದೇಶಕ್ಕೆ ತಡೆ ನೀಡಿತ್ತು. ಈ ತಡೆಯಾಜ್ಞೆ 2017ರ ಏಪ್ರಿಲ್‌ 13ರವರೆಗೆ ಮುಂದುವರಿದಿತ್ತು. ಕೊನೆಗೆ, ನ್ಯಾಯಾಲಯವು ಈ ಪ್ರಕರಣವನ್ನು 2018ರ ಜನವರಿ 3ರಂದು ವಜಾಗೊಳಿಸಿತ್ತು. ಹೀಗಾಗಿ, ಕೆಇಸಿ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ಕಂಪನಿಗೆ ಗುತ್ತಿಗೆ ನೀಡಿರುವುದರಲ್ಲಿ ಯಾವುದೇ ಲೋಪವಾಗಿಲ್ಲ’ ಎಂದುಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT