
ಕೆ.ಆರ್.ಪುರ: ರಸ್ತೆ ವಿಸ್ತರಣೆಗಾಗಿ ವರ್ತೂರು ಪೊಲೀಸ್ ಠಾಣೆಯನ್ನು ಗುಂಜೂರಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ, ವರ್ತೂರು ಹಿತರಕ್ಷಣಾ ವೇದಿಕೆ ಹಾಗೂ ಜಾಗೃತ ನಾಗರಿಕರು ಮತ್ತು ಗ್ರಾಮಸ್ಥರು ಸಹಿ ಸಂಗ್ರಹ ಅಭಿಯಾನ ನಡೆಸಿದರು.
‘ವರ್ತೂರು ಒಂದು ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ವ್ಯಾಪಾರ ಮತ್ತು ಸಂಪರ್ಕದ ಕೊಂಡಿಯಾಗಿದೆ. ಗುಂಜೂರಿಗಿಂತ ವರ್ತೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ವರ್ತೂರಿನಲ್ಲಿ ಉಳಿಯುವಂತೆ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
‘ವರ್ತೂರು ಗ್ರಾಮದ ಸರ್ವೆ ನಂಬರ್ 52ರಲ್ಲಿ ಸುಮಾರು 28 ಗುಂಟೆ ಜಮೀನು ಲಭ್ಯವಿದ್ದು, ಈ ಜಾಗದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಬೇಕು. ಠಾಣೆ ಬೇರೆಡೆಗೆ ಸ್ಥಳಾಂತರವಾಗಬಾರದು ಎಂದು ಸಹಿ ಸಂಗ್ರಹ ಅಭಿಯಾನವನ್ನು ಕೈಗೊಂಡು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಅವರಿಗೆ ಮನವಿ ನೀಡಲಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಕುಪ್ಪಿ ಮಂಜುನಾಥ್ ಹೇಳಿದರು.
ಮುಖಂಡರಾದ ಜಗದೀಶ್, ಇಕ್ಬಾಲ್ ಅಹ್ಮದ್, ಪಿ.ಕೃಷ್ಣಪ್ಲ, ಸುಬ್ಬಣ್ಣ, ಶ್ರೀಧರ್ ಟಿ., ಪೋಲಿಸ್ ನಾಗರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.