ADVERTISEMENT

ಕೆಎಸ್‌ಆರ್‌ಟಿಸಿಗೆ ರಾಷ್ಟ್ರಮಟ್ಟದ ಆರು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 0:06 IST
Last Updated 26 ಸೆಪ್ಟೆಂಬರ್ 2025, 0:06 IST
ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿ ಪರವಾಗಿ ಶಿವಾನಂದ ಎಂ ಕವಳಿಕಾಯಿ, ರಾಜೇಶ್ ಶೆಟ್ಟಿ ಸ್ವೀಕರಿಸಿದರು.
ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿ ಪರವಾಗಿ ಶಿವಾನಂದ ಎಂ ಕವಳಿಕಾಯಿ, ರಾಜೇಶ್ ಶೆಟ್ಟಿ ಸ್ವೀಕರಿಸಿದರು.   

ಬೆಂಗಳೂರು: ರಾಷ್ಟ್ರ ಮಟ್ಟದ  ಮೂರು ಅನ್‌ಲಾಕ್ಡ್, ಎರಡು ಎಂಕ್ಯೂಬ್‌ ಹಾಗೂ ಒಂದು ಸ್ಕಾಚ್‌ ಪ್ರಶಸ್ತಿಗಳಿಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ. 

ಸಾರಿಗೆ ಸುರಕ್ಷಾ ಯೋಜನೆಯ ಪರಿಚಯಕ್ಕಾಗಿ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣೆ ಪ್ರಶಸ್ತಿ, ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಪರಿಚಯಕ್ಕಾಗಿ ಅತ್ಯುತ್ತಮ ಹೊಸ ಉತ್ಪನ್ನ ಪ್ರಶಸ್ತಿ, ಡೈನಾಮಿಕ್ ಯುಪಿಐ ಮತ್ತು ಅವತಾರ್‌ ಪರಿಚಯಕ್ಕಾಗಿ ತಂತ್ರಜ್ಞಾನದ ಅತ್ಯುತ್ತಮ ಬಳಕೆ ಪ್ರಶಸ್ತಿಗಳು ಅನ್‌ಲಾಕ್ಡ್‌ ವಿಭಾಗದಲ್ಲಿ ಸಿಕ್ಕಿವೆ.

ಅಂಬಾರಿ ಉತ್ಸವ ಬಸ್‌ ಪರಿಚಯಕ್ಕಾಗಿ ವಿಡಿಯೊ ಮಾರ್ಕೆಟಿಂಗ್ ಅಭಿಯಾನದಲ್ಲಿ ಅತ್ಯುತ್ತಮ ವಿಷಯ ಪ್ರಶಸ್ತಿ, ಐರಾವತ್ ಕ್ಲಬ್ ಕ್ಲಾಸ್ ಬಸ್‌ ಪುನಶ್ಚೇತನದ ಪರಿಚಯಕ್ಕಾಗಿ ಅತ್ಯುತ್ತಮ ಉತ್ಪನ್ನ ನಿಯೋಜನೆ ತಂತ್ರ ಪ್ರಶಸ್ತಿಗಳು ಎಂಕ್ಯೂಬ್‌ನಲ್ಲಿ ಲಭಿಸಿವೆ.

ADVERTISEMENT

ಅನ್‌ಲಾಕ್ಡ್‌ ಮತ್ತು ಎಂಕ್ಯೂಬ್ ಪ್ರಶಸ್ತಿಗಳನ್ನು ಗುರುಗ್ರಾಮದಲ್ಲಿ ಪ್ರದಾನ ಮಾಡಲಾಯಿತು.

ಎಚ್‌ಆರ್‌ಎಂಎಸ್‌ ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಕ್ಕಾಗಿ ಸ್ಕಾಚ್‌ 2025 ಪ್ರಶಸ್ತಿಯನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಗಳನ್ನು ನಿಗಮದ ಪರವಾಗಿ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವಾನಂದ ಎಂ ಕವಳಿಕಾಯಿ, ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.