ಬೆಂಗಳೂರು: ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದಿಂದ ಬೆಂಗಳೂರು–ಘಾಟಿ ಸುಬ್ರಹ್ಮಣ್ಯ ಮಾರ್ಗದಲ್ಲಿ ಪ್ಯಾಕೇಜ್ ಪ್ರವಾಸವು ಜುಲೈ 26ರಂದು ಆರಂಭಗೊಳ್ಳಲಿದೆ.
ವಾರಾಂತ್ಯದ ದಿನಗಳಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಈ ಪ್ರವಾಸ ಇರಲಿದೆ. ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಶಿವಗಂಗೆಯಲ್ಲಿ ಗಂಗಾಧರೇಶ್ವರ ದೇವಸ್ಥಾನ, ಹೊನ್ನಮ್ಮ ದೇವಿ ದೇವಸ್ಥಾನ ವೀಕ್ಷಣೆ ಮಾಡಿ ಅಲ್ಲಿಂದ ಸಿದ್ಧಗಂಗಾ ಮಠ, ದೇವರಾಯನ ದುರ್ಗ ಭೋಗ ನರಸಿಂಹ ದೇವಸ್ಥಾನ, ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ, ವಿಧುರಾಶ್ವಥದ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನಗಳನ್ನು ವೀಕ್ಷಣೆ ಮಾಡಿ ಘಾಟಿ ಸುಬ್ರಹ್ಮಣ್ಯಕ್ಕೆ ಬಸ್ ತೆರಳಲಿದೆ. ಅಲ್ಲಿ ಸುಬ್ರಹ್ಮಣ್ಯ ಮತ್ತು ಲಕ್ಷ್ಮೀ ನರಸಿಂಹ ದೇವಸ್ಥಾನ ವೀಕ್ಷಣೆ ಮಾಡಿ ಬೆಂಗಳೂರಿಗೆ ವಾಪಸ್ ಹೊರಡಲಿದೆ. ರಾತ್ರಿ 8ಕ್ಕೆ ಬೆಂಗಳೂರು ತಲುಪಲಿದೆ.
ಅಶ್ವಮೇಧ ಕ್ಲಾಸಿಕ್ ಸಾರಿಗೆ ಬಸ್‌ನಲ್ಲಿ ಪ್ರವಾಸ ಇರಲಿದ್ದು, ವಯಸ್ಕರಿಗೆ ₹ 650 ಮತ್ತು 6ರಿಂದ 12 ವರ್ಷದವರಿಗೆ ₹ 500 ದರ ನಿಗದಿ ಮಾಡಲಾಗಿದೆ. ವೆಬ್ ಸೈಟ್: www.ksrtc.in & www.ksrtc.karnataka.gov.in ಮೂಲಕ ಟಿಕೆಟ್ ಪಡೆಯಬಹುದು. ಮಾಹಿತಿಗಾಗಿ ದೂರವಾಣಿ: 080-26252625,ಮೊಬೈಲ್: 7760990100/560/287 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.