ಬೆಂಗಳೂರು: ‘ಕುಸುಮ್ ಬಿ’ ಯೋಜನೆಯಡಿ ಕೊಳವೆ ಬಾವಿಗಳಿಗೆ ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಿ ಕೊಳ್ಳಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ 20 ಸಾವಿರ ರೈತರು
ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆ ಕಾರ್ಯ ಆರಂಭವಾಗಿದೆ.
‘ಬೆಸ್ಕಾಂ ವ್ಯಾಪ್ತಿಯಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸೌರವಿದ್ಯುತ್ ಪಂಪ್‌ಸೆಟ್‌ಗಳನ್ನು ಪೂರೈಸುವ ಕಂಪನಿಗಳು ಮತ್ತು ಬೆಸ್ಕಾಂ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಆರಂಭವಾಗಿದೆ. ಇದಾದ ಬಳಿಕ ಅರ್ಹ ಫಲಾನುಭವಿ ರೈತರಿಗೆ ತಮ್ಮ ಪಾಲಿನ ಹಣ ಪಾವತಿಸುವಂತೆ ಸೂಚಿಸಲಾಗುತ್ತದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಯೋಜನೆಯಡಿ ಕೊಳವೆಬಾವಿಗಳಿಗೆ ಸೌರ ಪಂಪ್‌ಸೆಟ್ ಅಳವಡಿಸಿ ಕೊಳ್ಳಲು ತಗಲುವ ಒಟ್ಟು ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಶೇ 50ರಷ್ಟು ಮತ್ತು ಕೇಂದ್ರ ಸರ್ಕಾರದಿಂದ ಶೇ 30ರಷ್ಟು ಸಬ್ಸಿಡಿ ಸಿಗಲಿದೆ. ಉಳಿದ
ಶೇ 20ರಷ್ಟು ಹಣವನ್ನು ರೈತರು ಭರಿಸಬೇಕು. ಆರಂಭದಲ್ಲಿ ರೈತರು ಸೌರ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಆದರೆ, ಈ ಬಗ್ಗೆ ಹೆಚ್ಚು ಅರಿವು ಮೂಡಿಸಿದ ನಂತರ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 25 ಸಾವಿರ ಕೊಳವೆಬಾವಿಗಳಿಗೆ ‘ಕುಸುಮ್ –ಬಿ ಯೋಜನೆಯಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಗುರಿ ನಿಗದಿಪಡಿಸಲಾಗಿದೆ.ಈಗಾಗಲೇ ಸುಮಾರು 3,500 ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೋಲಿಸಿದರೆ ಬೆಸ್ಕಾಂ ವ್ಯಾಪ್ತಿಯಲ್ಲೇ ಹೆಚ್ಚಾಗಿ ಅರ್ಜಿಗಳು ಬರುತ್ತಿವೆ. ಆದರೆ, ಎಷ್ಟು ಮಂದಿ ರೈತರು ಅರ್ಹರಾಗುತ್ತಾರೆ ಎಂಬುದು ಪರಿಶೀಲನೆ ಬಳಿಕ ಗೊತ್ತಾಗಲಿದೆ.
ಕೊಳವೆ →ಬಾವಿಯಲ್ಲಿ →400 ಅಡಿ ಒಳಗೆ ನೀರು ಲಭ್ಯವಾಗುತ್ತಿದ್ದರೆ ಮಾತ್ರ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಸಬಹುದು. ಅದಕ್ಕಿಂತ ಹೆಚ್ಚಿನ ಆಳದಲ್ಲಿ ನೀರು ಇದ್ದರೆ, ಇದು ಉಪಯೋಗ ವಾಗುವುದಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ ಬೆಸ್ಕಾಂ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ರೈತರಿಗೆ ಇದರ
ಪ್ರಯೋಜನವಾಗಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೊದಲಾದ ಜಿಲ್ಲೆಗಳಲ್ಲಿ ಒಂದು ಸಾವಿರ ಅಡಿಗೂ ಅಧಿಕ ಆಳದಷ್ಟು ಕೊಳವೆಬಾವಿಗಳು ಇರುತ್ತವೆ. ಅವುಗಳಿಗೆ ಸೌರ ಪಂಪ್‌ಸೆಟ್‌ಗಳ ಉಪಯೋಗವಾಗುವು ದಿಲ್ಲ. ಹೀಗಾಗಿ ಈಗ ಬಂದಿರುವ 20 ಸಾವಿರ ಅರ್ಜಿಗಳ ಪೈಕಿ ಶೇ 50ರಿಂದ 60ರಷ್ಟು ಅರ್ಜಿದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಶಿವಶಂಕರ್ ವಿವರಿಸಿದರು.
ಆರಂಭದಲ್ಲಿ 40 ಸಾವಿರ ಕೊಳವೆ ಬಾವಿಗಳಿಗೆ ಸೌರ ಪಂಪ್‌ಸೆಟ್ ಅಳವಡಿಸುವ ಗುರಿ ಇತ್ತು. ಬಳಿಕ ಅದನ್ನು 25 ಸಾವಿರಕ್ಕೆ ಇಳಿಸಲಾಗಿದೆ. ಇದರ ಸಾಧಕ–ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಳವೆ ಬಾವಿಗಳಿಗೆ ಇದನ್ನು ವಿಸ್ತರಿಸುವ ಸಾಧ್ಯತೆ ಇದೆ.
ಒಂದು ಪಂಪ್‌ಸೆಟ್‌ಗೆ 3 ಲಕ್ಷದಿಂದ 3.50 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅರ್ಜಿಗಳ ಪರಿಶೀಲನೆ ಬಳಿಕ ರೈತರು ತಮ್ಮ ಪಾಲಿನ ಕಂತು ಪಾವತಿಸಬೇಕು. ಇದಾದ ನಂತರ ಸಬ್ಸಿಡಿ ಹಣವನ್ನು
ಸಂಬಂಧಪಟ್ಟ ಕಂಪನಿಗೆ ವರ್ಗಾಹಿಸ ಲಾಗುತ್ತದೆ. ಅವರು ರೈತರ ಕೊಳವೆಬಾವಿಗೆ ಸೌರ ಪಂಪ್‌ಸೆಟ್ ಅಳವಡಿಸುತ್ತಾರೆ.: ‘ಕುಸುಮ್ ಬಿ’ ಯೋಜನೆಯಡಿ ಕೊಳವೆ ಬಾವಿಗಳಿಗೆ ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಿ ಕೊಳ್ಳಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ 20 ಸಾವಿರ ರೈತರು ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆ ಕಾರ್ಯ ಆರಂಭವಾಗಿದೆ.
‘ಬೆಸ್ಕಾಂ ವ್ಯಾಪ್ತಿಯಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸೌರವಿದ್ಯುತ್ ಪಂಪ್‌ಸೆಟ್‌ಗಳನ್ನು ಪೂರೈಸುವ ಕಂಪನಿಗಳು ಮತ್ತು ಬೆಸ್ಕಾಂ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಆರಂಭವಾಗಿದೆ. ಇದಾದ ಬಳಿಕ ಅರ್ಹ ಫಲಾನುಭವಿ ರೈತರಿಗೆ ತಮ್ಮ ಪಾಲಿನ ಹಣ ಪಾವತಿಸುವಂತೆ ಸೂಚಿಸಲಾಗುತ್ತದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಯೋಜನೆಯಡಿ ಕೊಳವೆಬಾವಿಗಳಿಗೆ ಸೌರ ಪಂಪ್‌ಸೆಟ್ ಅಳವಡಿಸಿ ಕೊಳ್ಳಲು ತಗಲುವ ಒಟ್ಟು ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ಶೇ 50ರಷ್ಟು ಮತ್ತು ಕೇಂದ್ರ ಸರ್ಕಾರದಿಂದ
ಶೇ 30ರಷ್ಟು ಸಬ್ಸಿಡಿ ಸಿಗಲಿದೆ. ಉಳಿದ
ಶೇ 20ರಷ್ಟು ಹಣವನ್ನು ರೈತರು ಭರಿಸಬೇಕು. ಆರಂಭದಲ್ಲಿ ರೈತರು ಸೌರ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಆದರೆ, ಈ ಬಗ್ಗೆ ಹೆಚ್ಚು ಅರಿವು ಮೂಡಿಸಿದ ನಂತರ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 25 ಸಾವಿರ ಕೊಳವೆಬಾವಿಗಳಿಗೆ ‘ಕುಸುಮ್ –ಬಿ ಯೋಜನೆಯಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಗುರಿ ನಿಗದಿಪಡಿಸಲಾಗಿದೆ.ಈಗಾಗಲೇ ಸುಮಾರು 3,500 ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೋಲಿಸಿದರೆ ಬೆಸ್ಕಾಂ ವ್ಯಾಪ್ತಿಯಲ್ಲೇ ಹೆಚ್ಚಾಗಿ ಅರ್ಜಿಗಳು ಬರುತ್ತಿವೆ. ಆದರೆ, ಎಷ್ಟು ಮಂದಿ ರೈತರು ಅರ್ಹರಾಗುತ್ತಾರೆ ಎಂಬುದು ಪರಿಶೀಲನೆ ಬಳಿಕ ಗೊತ್ತಾಗಲಿದೆ.
ಕೊಳವೆ →ಬಾವಿಯಲ್ಲಿ →400 ಅಡಿ ಒಳಗೆ ನೀರು ಲಭ್ಯವಾಗುತ್ತಿದ್ದರೆ ಮಾತ್ರ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಸಬಹುದು. ಅದಕ್ಕಿಂತ ಹೆಚ್ಚಿನ ಆಳದಲ್ಲಿ ನೀರು ಇದ್ದರೆ, ಇದು ಉಪಯೋಗ ವಾಗುವುದಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ ಬೆಸ್ಕಾಂ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ರೈತರಿಗೆ ಇದರ ಪ್ರಯೋಜನವಾಗಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೊದಲಾದ ಜಿಲ್ಲೆಗಳಲ್ಲಿ ಒಂದು ಸಾವಿರ ಅಡಿಗೂ ಅಧಿಕ ಆಳದಷ್ಟು ಕೊಳವೆಬಾವಿಗಳು ಇರುತ್ತವೆ. ಅವುಗಳಿಗೆ ಸೌರ ಪಂಪ್‌ಸೆಟ್‌ಗಳ ಉಪಯೋಗವಾಗುವು ದಿಲ್ಲ. ಹೀಗಾಗಿ ಈಗ ಬಂದಿರುವ 20 ಸಾವಿರ ಅರ್ಜಿಗಳ ಪೈಕಿ ಶೇ 50ರಿಂದ 60ರಷ್ಟು ಅರ್ಜಿದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಶಿವಶಂಕರ್ ವಿವರಿಸಿದರು.
ಆರಂಭದಲ್ಲಿ 40 ಸಾವಿರ ಕೊಳವೆ ಬಾವಿಗಳಿಗೆ ಸೌರ ಪಂಪ್‌ಸೆಟ್ ಅಳವಡಿಸುವ ಗುರಿ ಇತ್ತು. ಬಳಿಕ ಅದನ್ನು 25 ಸಾವಿರಕ್ಕೆ ಇಳಿಸಲಾಗಿದೆ.
ಇದರ ಸಾಧಕ–ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಳವೆ ಬಾವಿಗಳಿಗೆ ಇದನ್ನು ವಿಸ್ತರಿಸುವ ಸಾಧ್ಯತೆ ಇದೆ.
ಒಂದು ಪಂಪ್‌ಸೆಟ್‌ಗೆ 3 ಲಕ್ಷದಿಂದ 3.50 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅರ್ಜಿಗಳ ಪರಿಶೀಲನೆ ಬಳಿಕ ರೈತರು ತಮ್ಮ ಪಾಲಿನ ಕಂತು ಪಾವತಿಸಬೇಕು. ಇದಾದ
ನಂತರ ಸಬ್ಸಿಡಿ ಹಣವನ್ನು ಸಂಬಂಧಪಟ್ಟ ಕಂಪನಿಗೆ ವರ್ಗಾಹಿಸ ಲಾಗುತ್ತದೆ. ಅವರು ರೈತರ
ಕೊಳವೆಬಾವಿಗೆ ಸೌರ ಪಂಪ್‌ಸೆಟ್
ಅಳವಡಿಸುತ್ತಾರೆ.
ಸೌರ ಪಂಪ್‌ಸೆಟ್‌ಗಳಿಗೆ ಶೇ 80ರಷ್ಟು ಸಹಾಯಧನ
ರೈತರಿಗೆ ಹಗಲಲ್ಲೇ ವಿದ್ಯುತ್ ಪೂರೈಸಲು ಅನುಕೂಲ
ಬೇರೆ ಇಂಧನ ಮೂಲಗಳ ಮೇಲಿನ ಅವಲಂಬನೆ ತಪ್ಪಲಿದೆ
‘ಕುಸುಮ್ ಸಿ’ ಯೋಜನೆ
ಕುಸುಮ್ ಸಿ ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 1,055 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈಗಾಗಲೇ 200 ಮೆಗಾವಾಟ್ ಉತ್ಪಾದನೆ ಶುರುವಾಗಿದೆ. 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಶುರುವಾಗುವ ಹಂತದಲ್ಲಿದೆ. ಇನ್ನುಳಿದ 255 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕೆಲಸ ಶುರು ಮಾಡಬೇಕಾಗಿದೆ ಎಂದು ಶಿವಶಂಕರ್ ತಿಳಿಸಿದರು.
ಬೇಸಿಗೆಗೆ ಈಗಲೇ ಸಿದ್ಧತೆ
ಮುಂಬರುವ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 18,500 ಮೆಗಾವಾಟ್‌ಗೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. ರೈತರು ಬೆಳೆಗಳಿಗೆ ಹೆಚ್ಚಿನ ನೀರು ಬಳಸುವುದರಿಂದ ಬೇಡಿಕೆ ಹೆಚ್ಚಾಗಲಿದೆ. ಅಗತ್ಯವಿರುವ ವಿದ್ಯುತ್ ಲಭ್ಯವಿದೆ. ಆದರೆ, ಪೂರೈಕೆಯಲ್ಲಿ ಕೆಲವೊಂದು ವ್ಯತ್ಯಾಸಗಳು ಆಗುತ್ತವೆ. ಇವುಗಳನ್ನು ಸರಿಪಡಿಸಿಕೊಳ್ಳು ವಂತೆ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಿವಶಂಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.