ADVERTISEMENT

ಫಲಪುಷ್ಪ ಪ್ರದರ್ಶನ:50,500 ಮಂದಿ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:07 IST
Last Updated 12 ಆಗಸ್ಟ್ 2019, 20:07 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡರು
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡರು   

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ಸ್ವಾತಂತ್ರೋತ್ಸವ ಫಲ‍ಪುಷ್ಪ ಪ್ರದರ್ಶನ’ಕ್ಕೆ ಬಕ್ರೀದ್‌ ರಜೆ ಇದ್ದ ಕಾರಣ ಸೋಮವಾರ 50,500 ಮಂದಿ ಭೇಟಿ ನೀಡಿದರು. ಭಾನುವಾರಕ್ಕೆಹೋಲಿಸಿದರೆ ಉದ್ಯಾನಕ್ಕೆ ಭೇಟಿ ನೀಡಿದವರ ಸಂಖ್ಯೆ ಕಡಿಮೆ ಇತ್ತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಯಚಾಮರಾಜ ಒಡೆಯರ್ ಅವರ ನೂರಕ್ಕೂ ಹೆಚ್ಚಿನ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಒಡೆಯರ್‌ ಭಾವಚಿತ್ರದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು. ಇದಕ್ಕಾಗಿ ಸಾರ್ವಜನಿಕ ಸಂಪರ್ಕ ಇಲಾಖೆಯು ಸೆಲ್ಫಿ ಸ್ಟ್ಯಾಂಡ್‌ ವ್ಯವಸ್ಥೆ ಮಾಡಿತ್ತು.

ಊಟಿ, ಕೆಮ್ಮಣ್ಣುಗುಂಡಿ, ನಂದಿ ಬೆಟ್ಟ, ಕೆಆರ್‌ಎಸ್ ಹಾಗೂ ವಿವಿಧ ಉದ್ಯಾನಗಳ ಬಗ್ಗೆ ಮಾಹಿತಿ ಒದಗಿಸುವ ‘ಗಿರಿಧಾಮಗಳ ಮಾಹಿತಿ ಕೇಂದ್ರ’ವನ್ನು ತೆರೆಯಲಾಗಿತ್ತು.

ADVERTISEMENT

ಉದ್ಯಾನದ ಬೋನ್ಸಾಯ್‌ ಪಾರ್ಕ್ ಬಳಿಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ‘ಅಂಧರ ವಾದ್ಯಗೋಷ್ಠಿ’ ಆಯೋಜಿಸಲಾಗಿತ್ತು. ಸುಮಧುರ ಕಂಠದಿಂದ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.

ಫಲಪುಷ್ಪ ಪ್ರದರ್ಶನ ವೀಕ್ಷಣೆ ವಿವರ (ಸೋಮವಾರ)

ವಯಸ್ಕರು;40,350

ಮಕ್ಕಳು; 10,150

ಒಟ್ಟು; 50,500ಸಾವಿರ

ಸಂಗ್ರಹವಾದ ಶುಲ್ಕ;₹27.56 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.