ADVERTISEMENT

ಲಾಕ್‌ಡೌನ್ ಸಡಿಲಿಕೆ: ವಾಯು ವಿಹಾರದಿಂದಲೇ ಬೆಂಗಳೂರಿಗರ ದಿನ ಆರಂಭ

​ಪ್ರಜಾವಾಣಿ ವಾರ್ತೆ
Published 19 ಮೇ 2020, 8:33 IST
Last Updated 19 ಮೇ 2020, 8:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ ಮಾಡಿದ್ದು, ನಗರದ ಬಹುತೇಕ‌ಜನ ಮಂಗಳವಾರ ವಾಯುವಿಹಾರದಿಂದಲೇ ದಿನ ಆರಂಭಿಸಿದರು.

ಲಾಕ್‌ಡೌನ್ ಆದಾಗಿನಿಂದ ಲಾಲ್ ಬಾಗ್, ಕಬ್ಬನ್ ಪಾರ್ಕ್‌ ಸೇರಿ ಎಲ್ಲ ಉದ್ಯಾನಗಳನ್ನು ಬಂದ್ ಮಾಡಲಾಗಿತ್ತು. ಮಂಗಳವಾರ ಉದ್ಯಾನದಲ್ಲಿ ವಾಯುವಿಹಾರ ಮಾಡಲು ಅವಕಾಶ ನೀಡಲಾಗಿತ್ತು.

ಉದ್ಯಾನಕ್ಕೆ ಬಂದ ಜನ ಅಂತರ ಕಾಯ್ದುಕೊಂದು ವಿಹರಿಸಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು.

ADVERTISEMENT

ಇನ್ನು ಸಲೂನ್ ಮಳಿಗೆಗಳು ತೆರೆದಿದ್ದವು. ಇಷ್ಟುದಿನ ಸಲೂನ್ ಮಳಿಗೆಗಳನ್ನು ಬಂದ್ ಮಾಡಲಾಗಿತ್ತು. ಮಂಗಳವಾರ ಜನ ಮಳಿಗೆ ಎದುರು ಸರದಿಯಲ್ಲಿ ನಿಂತಿದ್ದು ಕಂಡುಬಂತು.

ಬಸ್ ಸಂಚಾರವೂ ಆರಂಭವಾಗಿದ್ದರಿಂದ ತಾವಿದ್ದ ಪ್ರದೇಶದಿಂದ ಮೆಜೆಸ್ಟಿಕ್ ನಿಲ್ದಾಣದತ್ತ ಜನ ಪ್ರಯಾಣಿಸಿದರು. ಅಲ್ಲಿಂದ ದೂರದ ಊರುಗಳಿಗೆ ಹೋದರು.

ಕೊರೊನಾ ವೈರಾಣು ಹರಡುವಿಗೆ ತಡೆಗೆ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ನಿಂದಾಗಿ ಬಹುತೇಕರು ಮನೆಯಲ್ಲೇ ಇದ್ದರು. ಅಗತ್ಯ ವಸ್ತುಗಳು ಬಿಟ್ಟರೆ ಬೇರೆ ವಸ್ತುಗಳ ಮಾರಾಟ ಸ್ಥಗಿತವಾಗಿತ್ತು. ಮಂಗಳವಾರ ಬಹುತೇಕ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು ಜನರು ಅಂಥ ಅಂಗಡಿಗಳ ಎದುರು ಜಮಾಯಿಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.