
ಪ್ರಜಾವಾಣಿ ವಾರ್ತೆಇದು ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಅಪರೂಪದ ಹಸಿರು ಸಂಪತ್ತು – ಮಾಚೋಹಳ್ಳಿ ಅರಣ್ಯ ಪ್ರದೇಶ. 1896ರಿಂದಲೇ ಅರಣ್ಯವೆಂದು ಗುರುತಿಸಲ್ಪಟ್ಟಿರುವ ಈ ಪ್ರದೇಶಕ್ಕೆ ಈಗ ಭಾರೀ ಅಪಾಯ ಎದುರಾಗಿದೆ. 2017ರಲ್ಲಿ ರಾಜ್ಯ ಸರ್ಕಾರ, ಅರಣ್ಯ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿ, ಮಾಚೋಹಳ್ಳಿ ಸರ್ವೆ ನಂಬರ್ 81ರಲ್ಲಿನ 78 ಎಕರೆ ಭೂಮಿಯನ್ನು ಕೇವಲ ₹1 ಲಕ್ಷ ಪ್ರತಿ ಎಕರೆ ದರದಲ್ಲಿ ಜಾತಿ ಆಧಾರಿತ 36 ಸಂಘಟನೆಗಳಿಗೆ ಲೀಸ್‌ಗೆ ನೀಡಲು ಮುಂದಾಗಿತ್ತು. ಹೈಕೋರ್ಟ್ ಹಸ್ತಕ್ಷೇಪದಿಂದಾಗಿ ಈ ಭೂಮಿ ಹಂಚಿಕೆ ತಾತ್ಕಾಲಿಕವಾಗಿ ನಿಂತಿದೆ. ಇಂದಿಗೂ ಈ ವಿವಾದ ಬಗೆಹರಿಯದೆ ಮುಂದುವರಿದಿದ್ದು, ₹2,500 ಕೋಟಿಗೂ ಅಧಿಕ ಮೌಲ್ಯದ ಅರಣ್ಯ ಭೂಮಿಯ ಅಳಿವು–ಉಳಿವಿನ ಪ್ರಶ್ನೆ ಎದುರಾಗಿದೆ. ಬೆಂಗಳೂರು ನಗರದಲ್ಲಿ ಹಸಿರು ಪ್ರದೇಶಗಳು ಹೇಗೆ ಕುಸಿಯುತ್ತಿವೆ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಈ ವಿಡಿಯೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.