ನಗರದಲ್ಲಿ ಮೂಲ ಮಾದಿಗ ಮೂಮೆಂಟ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಎನ್. ಮೂರ್ತಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಮುಖ್ಯಮಂತ್ರಿ ಚಂದ್ರು ಮತ್ತು ಕೆ.ಎಂ.ವಸುಂಧರ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಸಣ್ಣ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಹಕ್ಕು ಮತ್ತು ಸವಲತ್ತು ಪಡೆಯಲು ಸಾಧ್ಯ ಎಂದು ಬೇಲಿ ಮಠದ ಶಿವರುದ್ರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ಮೂಲ ಮಾದಿಗ ಮೂಮೆಂಟ್ ಆಯೋಜಿಸಿದ್ದ ಮಾದಾರ ಚೆನ್ನಯ್ಯರವರ ಜಯಂತಿ, ಮತಾಂತರ ಮತ್ತು ಒಳ ಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬತ್ತಿ, ಎಣ್ಣೆ, ದೀಪದ ಸ್ತಂಭ ಒಂದಾದಾಗ ಮಾತ್ರ ಬೆಳಕು ಕಾಣಬಹುದು. ಸಮುದಾಯಗಳು ಒಂದೊಂದು ದಿಕ್ಕಿನಲ್ಲಿ ಹೋರಾಟ ನಡೆಸಿದರೆ ಏನು ಮಾಡಲು ಆಗುವುದಿಲ್ಲ. ಮಾದಿಗ ಸಮುದಾಯ ತನ್ನ ಸ್ವಾಭಿಮಾನವನ್ನು ಉಳಿಸಿಕೊಂಡು ತಮ್ಮದೇ ಹೋರಾಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬಸವಣ್ಣ ಅವರು ತಮ್ಮ ಹಲವಾರು ವಚನಗಳಲ್ಲಿ ಮಾದಾರ ಚೆನ್ನಯ್ಯ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿ ಮುಖಂಡ ಎನ್.ಮೂರ್ತಿ, ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.
ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ವಸುಂಧರ, ಶಿರಾ ಕೆ.ಎಸ್.ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ.ನರಸಿಂಹ ಮೂರ್ತಿ, ಒಳ ಮೀಸಲಾತಿ ಮಾದಿಗರ ಒಕ್ಕೂಟದ ಸಂಚಾಲಕ ಎಚ್.ಎಂ.ಸುಬ್ಬರಾಜ್, ಜೆ.ಸಿ.ಪ್ರಕಾಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.