ADVERTISEMENT

ಕುಂಭಮೇಳ: ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 15:10 IST
Last Updated 25 ಡಿಸೆಂಬರ್ 2024, 15:10 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಕುಂಭಮೇಳದಲ್ಲಿ ಭಾಗವಹಿಸುವ ಯಾತ್ರಿಗಳಿಗೆ ಅನುಕೂಲ ಮಾಡಿಕೊಡಲು, ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಏಕಮಾರ್ಗ ವಿಶೇಷ ರೈಲು ಓಡಿಸಲಿದೆ.

ADVERTISEMENT

ಡಿ.26ರಂದು ರಾತ್ರಿ 11ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ವಿಶೇಷ ರೈಲು ಹೊರಡಲಿದೆ. ಡಿ.28ರಂದು ಮಧ್ಯಾಹ್ನ 1.30ಕ್ಕೆ ಪ್ರಯಾಗ್‌ರಾಜ್‌ ತಲುಪಲಿದೆ. ಈ ರೈಲು 15 ಸ್ಲೀಪರ್ ಕ್ಲಾಸ್ ಬೋಗಿಗಳು, 3 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಸೇರಿ 20 ಬೋಗಿಗಳನ್ನು ಒಳಗೊಂಡಿರುತ್ತದೆ.

ರೈಲಿನ ಪ್ರತಿ ನಿಲ್ದಾಣದ ಆಗಮನ–ನಿರ್ಗಮನ ಸಮಯ ತಿಳಿಯಲು ಭಾರತೀಯ ರೈಲ್ವೆಯ ವೆಬ್ ಸೈಟ್ www.enquiry.indianrail.gov.in ಸಂಪರ್ಕಿಸಬಹುದು. 139ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.