ಸಾವು
ಪ್ರಾತಿನಿಧಿಕ ಚಿತ್ರ
ದಾಬಸ್‌ಪೇಟೆ: ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿದ್ದಾರೆ.
ತುಮಕೂರಿನ ವಿ.ಪುನೀತ್ (27) ಮೃತ ಯುವಕ.
ಸೋಂಪುರ ಹೋಬಳಿಯ ನಿಡವಂದ ಎಲೆಕ್ಯಾತನಹಳ್ಳಿ ರಸ್ತೆಯ ದಾಸೇನಹಳ್ಳಿ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಯುವಕನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ತುಮಕೂರಿನ ಭೀಷ್ಮ ಬಯೋನೀಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ದೊಡ್ಡಮ್ಮನ ಮನೆಗೆ ಹಬ್ಬಕ್ಕೆ ಬಂದಿದ್ದರು. ನಿಡವಂದದಲ್ಲಿ ತಮ್ಮ ಗೆಳೆಯರನ್ನು ಮಾತನಾಡಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತ ಮಾಡಿ ಚಾಲಕ ವಾಹನವನ್ನು ನಿಲುಗಡೆ ಮಾಡದೇ ಪರಾರಿ ಆಗಿದ್ದಾನೆ. ದಾಬಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.