ADVERTISEMENT

ಮೆಟ್ರೊ ನಿಲ್ದಾಣಗಳಿಗೆ ನಾಮಕರಣ | ಬೇಸರವಾಗಿದ್ದರೆ ಕ್ಷಮೆ ಯಾಚಿಸುವೆ: ಮುಕುಂದರಾಜ್‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:36 IST
Last Updated 10 ಅಕ್ಟೋಬರ್ 2025, 0:36 IST
ಎಲ್‌.ಎನ್‌. ಮುಕುಂದರಾಜ್‌
ಎಲ್‌.ಎನ್‌. ಮುಕುಂದರಾಜ್‌   

ಬೆಂಗಳೂರು: ‘ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆ ಮೇರೆಗೆ ನಮ್ಮ ಮೆಟ್ರೊ ನಿಲ್ದಾಣಗಳಿಗೆ ಸಾಹಿತಿಗಳು, ಸಾಧಕರ ಹೆಸರಿರುವ ಪಟ್ಟಿ ಕಳುಹಿಸಲಾಗಿತ್ತು. ಸಾಧಕರನ್ನು ಗುರುತಿಸಲಾಗಿತ್ತೇ ಹೊರತು ಬೇರೆ ಉದ್ದೇಶ ಇರಲಿಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್. ಮುಕುಂದರಾಜ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರಿ ತಮ್ಮ ತಂದೆ ಹೆಸರನ್ನು ರಾಜಾಜಿನಗರ ನಿಲ್ದಾಣಕ್ಕೆ ಇಡುವ ವಿಚಾರ ಪ್ರಸ್ತಾಪಿಸಿದ್ದರು. ಇದೇ ವೇಳೆ ನಿಗಮದವರು ಕೋರಿದ್ದರಿಂದ ಆ ಭಾಗದಲ್ಲಿ ನೆಲಸಿದ್ದ ಎಚ್‌.ನರಸಿಂಹಯ್ಯ ಸಹಿತ ವಿವಿಧ ಕ್ಷೇತ್ರದವರ ಹೆಸರು ಶಿಫಾರಸು ಮಾಡಲಾಗಿತ್ತು. ತರಾತುರಿಯಲ್ಲಿ ಪಟ್ಟಿ ನೀಡುವಂತೆ ಕೋರಿದಾಗ ಮಹಿಳೆಯರು, ಸಾಧಕರ ಹೆಸರು ಬಿಟ್ಟು ಹೋಗಿರಬಹುದು. ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಯಾಚಿಸುವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT