ADVERTISEMENT

ಸಚಿವರ ಮೇಲೆ ಎರಡು ಬಾರಿ ಹನಿ ಟ್ರ್ಯಾಪ್: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 9:17 IST
Last Updated 20 ಮಾರ್ಚ್ 2025, 9:17 IST
<div class="paragraphs"><p>ಸಚಿವ ಸತೀಶ ಜಾರಕಿಹೊಳಿ</p></div>

ಸಚಿವ ಸತೀಶ ಜಾರಕಿಹೊಳಿ

   

ಬೆಂಗಳೂರು: ‘ಸಚಿವರ ಮೇಲೆ ಎರಡು ಬಾರಿ ಹನಿ ಟ್ರ್ಯಾಪ್ ಆಗಿದೆ. ಅದನ್ನು ಕೆಲವರು ಬಂಡವಾಳ ‌ಮಾಡಿಕೊಂಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, 'ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೇನೆ. ಇದಕ್ಕೆ ‌ಕಡಿವಾಣ ಹಾಕಬೇಕು' ಎಂದರು.

ADVERTISEMENT

‘ನಮ್ಮವರು ಅಷ್ಟೇ ಅಲ್ಲ. ಬೇರೆ ಪಕ್ಷದ ನಾಯಕರು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿದ್ದಾರೆ.‌ ಇದು ಇಲ್ಲಿಗೆ ನಿಲ್ಲಬೇಕು.‌ ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ’ ಎಂದರು.

ವಿದ್ಯುತ್ ದರ ಏರಿಕೆ ವಿಚಾರದ ಪ್ರತಿಕ್ರಿಯಿಸಿದ ಅವರು, ‘ಸಂಬಂಧ ಪಟ್ಟ ಇಲಾಖೆ ಇದೆ. ಆ ಇಲಾಖೆ‌ ಮಂತ್ರಿ ಪ್ರತಿಕ್ರಿಯೆ ಕೊಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.