ADVERTISEMENT

ಪಿಎಂ–ಗತಿಶಕ್ತಿ ಯೋಜನೆಯಡಿ ನಮ್ಮ ಮೆಟ್ರೊ 3ನೇ ಹಂತ ಶಿಫಾರಸು

ಒಟ್ಟು 81.15 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣ ಕಾರ್ಯ 2024ರ ಅಂತ್ಯದೊಳಗೆ ಆರಂಭಗೊಳ್ಳುವ ನಿರೀಕ್ಷೆ ಇದೆ.

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 0:30 IST
Last Updated 10 ಫೆಬ್ರುವರಿ 2024, 0:30 IST
<div class="paragraphs"><p>ಮೆಟ್ರೊ </p></div>

ಮೆಟ್ರೊ

   

ಬೆಂಗಳೂರು: ದೇಶದ ಐದು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿಯಲ್ಲಿ ಅನುಮೋದನೆ ನೀಡಲು ಶಿಫಾರಸು ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನ ‘ನಮ್ಮ ಮೆಟ್ರೊ’ ಮೂರನೇ ಹಂತವೂ ಸೇರಿದೆ.

ಗೋವಾ, ಮೇಘಾಲಯ ಮತ್ತು ಅಸ್ಸಾಂನ ಹೆದ್ದಾರಿ ಯೋಜನೆಗಳು, ಬಿಹಾರದ ರೈಲ್-ಓವರ್-ರೈಲ್ ಬಲ್ಬ್ ಲೈನ್ ನಿರ್ಮಾಣ, ಬೆಂಗಳೂರು ಮತ್ತು ದೆಹಲಿ/ಎನ್‌ಸಿಆರ್‌ನಲ್ಲಿ ನಗರ ಮೆಟ್ರೊ ಸಾರಿಗೆ ಯೋಜನೆಗಳ ವಿವರಗಳನ್ನು ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಎನ್‌ಎಂಪಿ) ಮ್ಯಾಪಿಂಗ್ ಆಧರಿಸಿ ಪರಿಶೀಲಿಸಲಾಗಿದೆ. 65ನೇ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್‌ಪಿಜಿ) ಸಭೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಆನಂತರ ಅನುಮೋದನೆಗೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ADVERTISEMENT

ಸರಕು ಸಾಗಾಟ ವೆಚ್ಚವನ್ನು ಕಡಿಮೆ ಮಾಡಲು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯನ್ನು ಎನ್‌ಪಿಜಿ ಪ್ರಾರಂಭಿಸಿದೆ. ₹ 500 ಕೋಟಿಗಿಂತ ಹೆಚ್ಚಿನ ಹೂಡಿಕೆಗಳನ್ನು ಹೊಂದಿರುವ ಯೋಜನೆಗಳಿಗೆ ಸಾರ್ವಜನಿಕ ಹೂಡಿಕೆ ಮಂಡಳಿ ಅಥವಾ ಹಣಕಾಸು ಸಚಿವಾಲಯದ ಅಡಿಯಲ್ಲಿ ವೆಚ್ಚ ಇಲಾಖೆಯಿಂದ ಅನುಮತಿ ನೀಡುವ ಮೊದಲು ಎನ್‌ಪಿಜಿಯ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೊ 3ನೇ ಹಂತ: ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ, ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ ಹಾಗೂ ಸರ್ಜಾಪುರದಿಂದ ಹೆಬ್ಬಾಳವರೆಗೆ ಮೂರು ಕಾರಿಡಾರ್‌ಗಳನ್ನು ‘ನಮ್ಮ ಮೆಟ್ರೊ’ ಮೂರನೇ ಹಂತ ಹೊಂದಿದೆ. ಒಟ್ಟು 81.15 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣ ಕಾರ್ಯ 2024ರ ಅಂತ್ಯದೊಳಗೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.