ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಮಂಗಳವಾರ ಮೆಟ್ರೊ ರೈಲುಗಳು ವಾಣಿಜ್ಯ ಸಂಚಾರ ಆರಂಭಿಸಿದವು. ಹಲವು ವರ್ಷಗಳಿಂದ ಕಾಯುತ್ತಿದ್ದ ಗಳಿಗೆಗೆ ಈ ಭಾಗದ ಜನ ಸಾಕ್ಷಿಯಾದರು. ಸಂಚಾರ ದಟ್ಟಣೆಯಿಂದ ರೋಸಿ ಹೋಗಿದ್ದವರು, Yellow Line ಮೆಟ್ರೊದಲ್ಲಿ ಓಡಾಡಿ ನಿರಾಳರಾದರು. ಆದರೆ, ಕೇವಲ ಮೂರೇ ರೈಲುಗಳು ಕಾರ್ಯಾಚರಣೆಯಲ್ಲಿ ಇದ್ದಿದ್ದರಿಂದ ಸುಮಾರು 25 ನಿಮಿಷಕ್ಕೊಂದು ರೈಲು ಬರುತ್ತಿದ್ದುದು ಪ್ರಯಾಣಿಕರಿಗೆ ಬೇಸರ ತರಿಸಿತ್ತು. ಅಲ್ಲದೆ, ಇದರಿಂದ, ಆರ್.ವಿ. ರೋಡ್ ಮತ್ತು ಬೊಮ್ಮಸಂದ್ರ ನಿಲ್ದಾಣಗಳಲ್ಲಿ ಜನದಟ್ಟಣೆಯೂ ಹೆಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.