ADVERTISEMENT

ಕೆಎಂಎಫ್‌: ಜೂನ್‌ 1ರಂದು ನಂದಿನಿ ಪನೀರ್‌ ಖಾದ್ಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 16:19 IST
Last Updated 31 ಮೇ 2025, 16:19 IST
ನಂದಿನಿ ಲೊಗೊ
ನಂದಿನಿ ಲೊಗೊ   

ಬೆಂಗಳೂರು: ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಕೇಂದ್ರ ಕಚೇರಿಯಲ್ಲಿ ಜೂನ್‌ 1ರಂದು ಬೆಳಿಗ್ಗೆ 11.30ಕ್ಕೆ ನಂದಿನಿ ಪನೀರ್‌ ಖಾದ್ಯ ಸ್ಪರ್ಧೆ ನಡೆಯಲಿದೆ.

ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ 18 ವಿವಿಧ ಸ್ವಾದಗಳ ನಂದಿನ ಗುಡ್‌ಲೈಫ್‌ ಮಫಿನ್ಸ್‌, ಸ್ಪೈಸ್‌ ಕೇಕ್ಸ್‌, ಬಾರ್‌ ಕೇಕ್ಸ್‌ ಉತ್ಪನ್ನಗಳು ಬಿಡುಗಡೆಯಾಗಲಿವೆ. ಅದೇ ಸಂದರ್ಭದಲ್ಲಿ ನಂದಿನಿ ಪನೀರ್‌ ಖಾದ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌, ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಭಾಗವಹಿಸಲಿದ್ದಾರೆ ಎಂದು ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಆಹಾರ ಮತ್ತು ಕೃಷಿ ಸಂಸ್ಥೆಯು (ಎಫ್‌ಎಒ) ಜೂನ್‌ 1ನ್ನು ವಿಶ್ವ ಹಾಲು ದಿನ ಎಂದು 2001ರಲ್ಲಿ ಘೋಷಣೆ ಮಾಡಿತ್ತು. ಪ್ರತಿ ವರ್ಷ ಕೆಎಂಎಫ್‌ ಮತ್ತು ಜಿಲ್ಲಾ ಹಾಲು ಒಕ್ಕೂಟಗಳು ತಮ್ಮ ಮಾರುಕಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಾಲಿನಲ್ಲಿರುವ ಪೌಷ್ಟಿಕಾಂಶಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.