ADVERTISEMENT

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸಿ: ಸಾಹಿತಿ ಎಲ್‌.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 20:02 IST
Last Updated 9 ಡಿಸೆಂಬರ್ 2025, 20:02 IST
<div class="paragraphs"><p>ಎಸ್.ವಿಜಯ ಗುರುರಾಜ, ಸತ್ಯೇಶ್ ಎನ್. ಬೆಳ್ಳೂರ್, ಚ.ಹ.ರಘುನಾಥ್ ಅವರಿಗೆ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ, ಟಿ.ತಿಮ್ಮೇಶ್ ಅವರಿಗೆ ಕನ್ನಡ ಚಿರಂಜೀವಿ ಪ್ರಶಸ್ತಿ, ಹಿ.ಚಿ. ಬೋರಲಿಂಗಯ್ಯ ಅವರಿಗೆ ಡಾ.ಎಂ.ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ, ಅ.ಕೃ. ಸೋಮಶೇಖರ್ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.</p></div>

ಎಸ್.ವಿಜಯ ಗುರುರಾಜ, ಸತ್ಯೇಶ್ ಎನ್. ಬೆಳ್ಳೂರ್, ಚ.ಹ.ರಘುನಾಥ್ ಅವರಿಗೆ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ, ಟಿ.ತಿಮ್ಮೇಶ್ ಅವರಿಗೆ ಕನ್ನಡ ಚಿರಂಜೀವಿ ಪ್ರಶಸ್ತಿ, ಹಿ.ಚಿ. ಬೋರಲಿಂಗಯ್ಯ ಅವರಿಗೆ ಡಾ.ಎಂ.ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ, ಅ.ಕೃ. ಸೋಮಶೇಖರ್ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ಬೆಂಗಳೂರು: ‘ಪ್ರತಿಯೊಬ್ಬರಲ್ಲೂ ಇಂಗ್ಲಿಷ್‌ ಕಲಿಕೆಯ ವ್ಯಾಮೋಹ ಹೆಚ್ಚುತ್ತಿದೆ. ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದ್ದು, ಭಾರತೀಯ ಭಾಷೆಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ತಡೆಯಲು ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣ ಮಾಡುವುದು ಸೂಕ್ತ’ ಎಂದು ಸಾಹಿತಿ ಎಲ್‌.ಹನುಮಂತಯ್ಯ ಹೇಳಿದರು.

ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ಕಾರ್ಮಿಕ ಲೋಕ ಸಂಘಟನೆಗಳು ಬುಧವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ನ್ಯಾಯಾಲಯವು ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಟ್ಟಿದೆ. ಗೋಜಲುಗಳಿಂದ ಕನ್ನಡದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಇದರ ನಡುವೆ ನಗರ ಪ್ರದೇಶದವರು ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಯತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ತಿಳಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಸುಧಾರಿಸುವುದರಿಂದ ಮಾತ್ರ ಮಕ್ಕಳನ್ನು ಸೆಳೆಯಲು ಸಾಧ್ಯವಿದೆ. ಸಮವರ್ತಿ ಪಟ್ಟಿಯಲ್ಲಿ ಶಿಕ್ಷಣವೂ ಇರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ರಾಷ್ಟ್ರೀಕರಣದ ವಿಚಾರದಲ್ಲಿ ನಿಲುವನ್ನು ಸ್ಪಷ್ಟಪಡಿಸಬೇಕು. ಉದ್ಯೋಗದಲ್ಲಿ ಸ್ಥಳೀಯ ಭಾಷೆಯ ಅರಿವು ಕಡ್ಡಾಯವಾಗಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಕಡೆ ಹೋಟೆಲ್‌ ಕೆಲಸಗಳಲ್ಲಿ ಕನ್ನಡಿಗರು ಕಡಿಮೆಯಾಗಿ ಈಶಾನ್ಯ ರಾಜ್ಯದವರು ಬರುತ್ತಿದ್ದಾರೆ. ಸಣ್ಣ ಸಣ್ಣ ಉದ್ಯೋಗಗಳಿಗೂ ಹೊರ ರಾಜ್ಯದವರು ಬಂದಿರುವುದರಿಂದ ಸ್ಥಳೀಯರಿಗೆ ಅವಕಾಶ ತಪ್ಪುತ್ತಿದೆ. ಕೌಶಲದ ಕಾರಣ ಅವಕಾಶ ತಪ್ಪುತ್ತಿರುವುದರಿಂದ ಸ್ಥಳೀಯರಿಗೆ ಉದ್ಯೋಗ ನೀಡಲು ಸರೋಜಿನಿ ಮಹಿಷಿ ವರದಿಯಲ್ಲಿ 11 ಶಿಫಾರಸುಗಳನ್ನಾದರೂ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಬೆಂಗಳೂರಿನ ಉದ್ಯಮ ವಲಯದಲ್ಲಿ ₹10 ಲಕ್ಷ ಕೋಟಿ ಹೂಡಿಕೆಯಾಗುವ ಪ್ರಸ್ತಾವಗಳಿದ್ದು, ಮುಂದಿನ ಕೆಲ ವರ್ಷದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊರ ದೇಶದವರೊಂದಿಗೆ ನಮ್ಮವರೂ ಸ್ಪರ್ಧಿಸುವ ಸನ್ನಿವೇಶವಿದೆ. ನಮ್ಮವರಿಗೆ ಉದ್ಯೋಗ ಸಿಗಲು ಬೇಕಾದ ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯ’ ಎಂದರು.

ಕನ್ನಡ ಹೋರಾಟಗಾರ ವ.ಚ.ಚನ್ನೇಗೌಡ, ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ, ಬೆ.ರಾ.ನಾಗರಾಜ, ಮ.ಚಂದ್ರಶೇಖರ್ ಬಾ.ಹ.ಉಪೇಂದ್ರ, ಅಮೃತಾ ನಾರಾಯಣ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಎಸ್.ವಿಜಯ ಗುರುರಾಜ, ಸತ್ಯೇಶ್ ಎನ್. ಬೆಳ್ಳೂರ್, ಚ.ಹ.ರಘುನಾಥ್ ಅವರಿಗೆ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ, ಟಿ.ತಿಮ್ಮೇಶ್ ಅವರಿಗೆ ಕನ್ನಡ ಚಿರಂಜೀವಿ ಪ್ರಶಸ್ತಿ, ಹಿ.ಚಿ. ಬೋರಲಿಂಗಯ್ಯ ಅವರಿಗೆ ಡಾ.ಎಂ.ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ, ಅ.ಕೃ. ಸೋಮಶೇಖರ್ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉತ್ತಮ ಸರ್ಕಾರಿ ಶಾಲಾ ಬಹುಮಾನವನ್ನು ಗದಗ ಜಿಲ್ಲೆ ಯಕ್ಲಾಸಪೂರ ಶ್ರೀಮತಿ ಪಾರ್ವತೆವ್ವ ಕೋಂ ಹಿರೇಬಸಪ್ಪ ಹಳೇಮನಿ ಸರ್ಕಾರಿ ಪ್ರೌಢಶಾಲೆಯ ಪರವಾಗಿ ಶಿಕ್ಷಕ ಎಂ.ಎಚ್. ಸವದತ್ತಿ ಪಡೆದುಕೊಂಡರು. ಎಲ್.ಹನುಮಂತಯ್ಯ, ರಾ.ನಂ. ಚಂದ್ರಶೇಖರ, ಪುರುಷೋತ್ತಮ ಬಿಳಿಮಲೆ, ವ.ಚ. ಚನ್ನೇಗೌಡ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ

ಸಾಧಕರಿಗೆ ಪ್ರಶಸ್ತಿ

ಕೃತಿಗೆ ಬಹುಮಾನ ಜಾನಪದ ಸಂಶೋಧಕ ಹಿ.ಚಿ. ಬೋರಲಿಂಗಯ್ಯ ಅವರಿಗೆ 'ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ ಕನ್ನಡ ಹೋರಾಟಗಾರ ಟಿ. ತಿಮ್ಮೇಶ್ ಅವರಿಗೆ ' ಕನ್ನಡ ಚಿರಂಜೀವಿ ಪ್ರಶಸ್ತಿ' ಕೆ.ಜಿ.ಎಫ್.ನ ಕನ್ನಡಪರ ಕಾರ್ಯಕರ್ತ ಹ.ಕೃ. ಸೋಮಶೇಖರ ಅವರಿಗೆ 'ಕನ್ನಡ ಅರವಿಂದ ಪ್ರಶಸ್ತಿ'‌ ಪ್ರದಾನ ಮಾಡಲಾಯಿತು. ಮಯೂರ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ ಅವರ ‘ಇಳಿಸಲಾಗದ ಶಿಲುಬೆ’ ಕೃತಿಗೆ ‘ಹಾಮಾನಾ ಕನ್ನಡ ಜಾಗೃತಿ’ ಪುಸ್ತಕ ಬಹುಮಾನ ನೀಡಲಾಯಿತು. ಸತ್ಯೇಶ್ ಬೆಳ್ಳೂರ್ ಕನ್ನಡೋತ್ಸವ ನೃತ್ಯ ನಾಟಕಕ್ಕೆ ಸಮಾಧಾನಕರ ಮತ್ತು ವಿಜಯಾ ಗುರುರಾಜ್ ಅವರ ಪ್ರಬಂಧ ರತ್ನಗಳು ಕೃತಿಗೆ ಮೆಚ್ಚುಗೆ ಬಹುಮಾನ ಲಭಿಸಿತು. ಗದಗ ಜಿಲ್ಲೆಯ ಯಕ್ಲಾಸಪುರದ ಪಾರ್ವತೆವ್ವ ಹಿರೇಬಸಪ್ಪ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ₹10 ಸಾವಿರ ನಗದು ಬಹುಮಾನ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ಅನ್ಯಭಾಷೆಯ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.