
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಸುಭಾಷ್‌ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಜ್ಯೋತಿ ಬೆಳಗಿಸಲು ತಮ್ಮ ರಕ್ತವನ್ನೇ ಹರಿಸಿದ ಮಹಾನ್ ಚೇತನ’ ಎಂದು ಹಂಪಿ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಮುರಿಗೆಪ್ಪ ಸ್ಮರಿಸಿದರು.
ನೇತಾಜಿ ಸಮಿತಿಯು ಮತ್ತಿಕೆರೆಯ ನೇತಾಜಿ ವೃತ್ತದಲ್ಲಿ ಆಯೋಜಿಸಿದ್ದ ನೇತಾಜಿಯವರ 129ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನೇತಾಜಿ ಅವರು ಕರ್ನಾಟಕಕ್ಕೆ ಭೇಟಿ ನೀಡುವುದನ್ನು ಕಾಂಗ್ರೆಸ್ಸಿಗರು ಟೀಕಿಸಿದ್ದರು. ಅವರನ್ನು ಎದುರಿಸಿ ಅಂದು ಮೈಲಾರ ಮಹದೇವ ಅವರು ನೇತಾಜಿಯನ್ನು ಬರಮಾಡಿಕೊಂಡಿದ್ದರು’ ಎಂದು ನೆನಪು ಮಾಡಿಕೊಂಡರು..
ಸಮಿತಿಯ ಸದಸ್ಯರಾದ ವಿನಯ್ ಸಾರಥಿ, ಕಮಲ್ ಸೇನ್ ಮತ್ತು ಕೃಷ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.