ಕೆಂಗೇರಿ: ಶೈಕ್ಷಣಿಕ ವಿಷಯದಲ್ಲಿ ಮಕ್ಕಳ ಅಭಿಪ್ರಾಯಕ್ಕೆ ಪೋಷಕರು ಮನ್ನಣೆ ನೀಡಬೇಕು. ಅವರ ಆಯ್ಕೆಯ ವಿಷಯಗಳನ್ನು ಅಭ್ಯಾಸ ಮಾಡಲು ಅವಕಾಶ ನೀಡಿದರೆ ಸಾಧನೆ ಮಾಡಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಕೆಂಗೇರಿ ಬಿಜಿಎಸ್ ಪಿಯು ಕಾಲೇಜಿನ ನೂತನ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐನ್‌ಸ್ಟೈನ್ ಬಾಲ್ಯದಿಂದಲೂ ಕುತೂಹಲಕಾರಿ ವ್ಯಕ್ತಿತ್ವ ಹೊಂದಿದ್ದರು. ಪ್ರಶ್ನಾ ಮನೋಭಾವ ರೂಢಿಸಿಕೊಂಡಿದ್ದರು. ಹೀಗಾಗಿಯೇ ಅವರು ಜಗತ್ತಿನ ಶ್ರೇಷ್ಟ ವಿಜ್ಞಾನಿಯಾಗಿ, ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.
ನಟ ತಬಲಾ ನಾಣಿ ಮಾತನಾಡಿ, ‘ಅಕ್ಷರ ಜ್ಞಾನ ಹೊಂದಿರದವರು ಪಶುವಿಗೆ ಸಮಾನ ಎಂಬ ಮಾತಿದೆ. ಸಂಸ್ಕಾರ ರಹಿತ ಶಿಕ್ಷಣದಿಂದಲೂ ಸಮಾಜಕ್ಕೆ ಯಾವುದೇ ಕೊಡುಗೆ ಲಭಿಸುವುದಿಲ್ಲ’ ಎಂದರು.
ನೃಪತುಂಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಶ್ರೀನಿವಾಸ್ ಬಳ್ಳಿ ಮಾತನಾಡಿದರು. ಗಾಯಕ ಕಡಬಗೆರೆ ಮುನಿರಾಜು ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಬಿಜಿಎಸ್ ಮತ್ತು ಎಸ್‌ಜೆಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ನಟಿಯರಾದ ಧನ್ಯ ರಾಮ್‌ಕುಮಾರ್, ರೂಪಿಕಾ, ಪಿಯು ಕಾಲೇಜು ಪ್ರಾಂಶುಪಾಲೆ ನೇತ್ರಾವತಿ ವೈ.ಎಸ್, ಶೈಕ್ಷಣಿಕ ನಿರ್ದೇಶಕ ಪುಟ್ಟರಾಜು, ಅಮರ್ ನಾಥ್, ವೀರಪ್ಪಾಜಿ ಬಿ., ಶಿವಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.