‘ಆರ್‌ಸಿಬಿ ಸಂಭ್ರಮ’ದ ಕಾಲ್ತುಳಿತಕ್ಕೆ ಯಾರೂ ಹೊಣೆ ಅಲ್ಲವಂತೆ! UDR ಕೇಸ್ ದಾಖಲು!
ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ವಿವಿಧ ಗೇಟ್‌ಗಳ ಬಳಿ ಬುಧವಾರ ಸಂಜೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ 11 ಯುಡಿಆರ್ (ಅಸಹಜ ಸಾವು) ಪ್ರಕರಣಗಳು ದಾಖಲಾಗಿವೆ.
ಕಾಲ್ತುಳಿತ ಘಟನೆಯಲ್ಲಿ ಭೂಮಿಕ್ (20), ಸಹನಾ (19), ಪೂರ್ಣಚಂದ್ರ (32), ಚಿನ್ಮಯಿ (19), ದಿವ್ಯಾಂಶಿ (13), ಶ್ರವಣ್ (20), ದೇವಿ (19), ಶಿವಲಿಂಗ್ (17)
ಮನೋಜ್ (33), ಅಕ್ಷತಾ ಸೇರಿ 11 ಮಂದಿ ಮೃತಪಟ್ಟಿದ್ದರು. ಪ್ರತ್ಯೇಕ ಯುಡಿಆರ್ ಪ್ರಕರಣಗಳು ದಾಖಲಾಗಿವೆ.
ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಹೊಣೆ ಮಾಡಿಲ್ಲ. ಅಸಹಜ ಸಾವು ಪ್ರಕರಣ ಎಂದಷ್ಟೇ ದಾಖಲು ಮಾಡಿಕೊಂಡಿದ್ದಾರೆ. ಕ್ರಮ ಕೈಗೊಳ್ಳದೇ ಕಾರ್ಯಕ್ರಮ ಆಯೋಜಿಸಿದ್ದರವನ್ನು ಹೊಣೆ ಮಾಡಿ ಎಫ್ಐಆರ್ ದಾಖಲಿಸಬೇಕು ಎಂದು ಮೃತರ ಕುಟುಂಬದವರು ಆಗ್ರಹಿಸಿದ್ದಾರೆ.
ಇಬ್ಬರ ಸ್ಥಿತಿ ಗಂಭೀರ: ವಿವಿಧ ಆಸ್ಪತ್ರೆಗಳಲ್ಲಿ 47 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.