ADVERTISEMENT

ಒಲಿಂಪಿಯಾಡ್‌: ನಾರಾಯಣ ಶಿಕ್ಷಣ ಸಂಸ್ಥೆಗೆ ಎರಡು ಚಿನ್ನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 15:44 IST
Last Updated 28 ಆಗಸ್ಟ್ 2025, 15:44 IST
ಚಿನ್ನದ ಪದಕ ಪಡೆದ ಬನಿಬ್ರತ ಮಜೀ ಮತ್ತು ಅಕ್ಷತ್ ಶ್ರೀವಾಸ್ತವ 
ಚಿನ್ನದ ಪದಕ ಪಡೆದ ಬನಿಬ್ರತ ಮಜೀ ಮತ್ತು ಅಕ್ಷತ್ ಶ್ರೀವಾಸ್ತವ    

ಬೆಂಗಳೂರು: ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತವಿಜ್ಞಾನ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರಾಯಣ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಎರಡು ಚಿನ್ನದ ಪದಕ ಪಡೆದಿದ್ದಾರೆ.

‘ಬನಿಬ್ರತ ಮಜೀ ಮತ್ತು ಅಕ್ಷತ್ ಶ್ರೀವಾಸ್ತವ ಚಿನ್ನದ ಪದಕ ಪಡೆದವರು. ಆಗಸ್ಟ್‌ 11ರಿಂದ 21ರವರೆಗೆ ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ವಿಶ್ವದ 300 ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತ ತಂಡವು ಒಟ್ಟು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿ ಪದಕ  ಗೆದ್ದಿದ್ದು, ಅದರಲ್ಲಿ ಇಬ್ಬರು ನಮ್ಮ ವಿದ್ಯಾರ್ಥಿಗಳು’ ಎಂದು ನಾರಾಯಣ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಸಿಂಧೂರ ನಾರಾಯಣ ಮತ್ತು ಶರಣಿ ನಾರಾಯಣ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತವಿಜ್ಞಾನ ಒಲಿಂಪಿಯಾಡ್ (ಐಒಎಎ) ಸವಾಲಿನ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಒಂದಾಗಿದೆ. ಪ್ರತಿಭೆ, ದತ್ತಾಂಶ ವಿಶ್ಲೇಷಣೆ ಮತ್ತು ವೀಕ್ಷಣಾ ಕೌಶಲಗಳನ್ನು ಆಧರಿಸಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.