ADVERTISEMENT

ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿ ಸಾವಿನ ನಂತರ ಅಂಗಾಗ ದಾನ ಮಾಡಿದ ಮೃತನ ಕುಟುಂಬ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 16:17 IST
Last Updated 20 ಡಿಸೆಂಬರ್ 2025, 16:17 IST
<div class="paragraphs"><p>ಮೃತಪಟ್ಟಿರುವ ವೆಂಕಟೇಶ್‌ ಕೆ.</p></div>

ಮೃತಪಟ್ಟಿರುವ ವೆಂಕಟೇಶ್‌ ಕೆ.

   

ಬೆಂಗಳೂರು: ಮಿದುಳು ನಿಷ್ಕ್ರೀಯವಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿರುವ ಘಟನೆಯು ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಜರುಗಿದೆ.

ನ.29ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟೇಶ್‌ ಕೆ.(46) ಎನ್ನುವವರಿಗೆ ಮಿದುಳು ನಿಷ್ಕ್ರೀಯವಾಗಿತ್ತು. ಚಿಕಿತ್ಸೆಗಾಗಿ ಯಶವಂತಪುರದಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾಗುವ ಲಕ್ಷಣ ಕಂಡುಬಂದಿರಲಿಲ್ಲ.

ADVERTISEMENT

ವೆಂಕಟೇಶ್‌ ಅವರಿಗೆ ಡಿ.1ರಂದು ಸಂಪೂರ್ಣ ಮಿದುಳು ನಿಷ್ಕ್ರೀಯವಾಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತಿದ್ದ ವೈದ್ಯರು ಮಾಹಿತಿ ನೀಡಿದ್ದಾರೆ.

ಆಘಾತದ ನಡುವೆಯೂ ಅವರ ಮೃತರ ಕುಟುಂಬದವರು ಅಂಗಾಗ ದಾನ ಮಾಡಲು ಬಯಸಿದ್ದರು. ಅವರ ಯಕೃತ್ತು, ಮೂತ್ರಪಿಂಡ, ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟಗಳನ್ನು ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವೆಂಕಟೇಶ್‌ ಅವರು ಕಷ್ಟ ಜೀವಿಯಾಗಿದ್ದರು. ಅವರ ಅಂಗಾಗಗಳನ್ನು ದಾನ ಮಾಡುವ ಮೂಲಕ ಅವರ ಸಾವಿಗೆ ಗೌರವ ಸೂಚಿಸಿದ್ದೇವೆ. ಅಂಗಾಗ ದಾನದ ಮೂಲಕ ಅವರು ಇನ್ನೂ ನಮ್ಮ ಜೊತೆಗಿದ್ದಾರೆ ಎಂದು ಅನಿಸುತ್ತಿದೆ ಎಂದು ಅವರ ಸಹೋದರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.