ADVERTISEMENT

‘ಸಾಯಿಲ್ ವಾಸು’ ಎಂದೇ ಜನಪ್ರಿಯರಾಗಿದ್ದ ಪಿ.ಶ್ರೀನಿವಾಸ್ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 20:13 IST
Last Updated 13 ಸೆಪ್ಟೆಂಬರ್ 2025, 20:13 IST
   

ಬೆಂಗಳೂರು: ಸಾವಯವ ಕೃಷಿ ಕ್ಷೇತ್ರದಲ್ಲಿ ‘ಸಾಯಿಲ್ ವಾಸು’ ಎಂದೇ ಜನಪ್ರಿಯರಾಗಿದ್ದ ಪಿ.ಶ್ರೀನಿವಾಸ್ (65) ಹೃದಯಾಘಾತದಿಂದ ಶನಿವಾರ ನಿಧನರಾದರು.

ಮೃತರಿಗೆ ತಾಯಿ, ಪತ್ನಿ ಮತ್ತು ಪುತ್ರ ಇದ್ದಾರೆ. ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12ಕ್ಕೆ ಹೆಬ್ಬಾಳದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

90ರ ದಶಕದಿಂದ ಸಾವಯವ ಕೃಷಿ ತರಬೇತಿ, ಪ್ರಚಾರದಲ್ಲಿ ಸಕ್ರಿಯರಾಗಿದ್ದ ವಾಸು ಅವರು ದೇಶದ ಸಾವಯವ ಕೃಷಿ ದಿಗ್ಗಜರೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ‘SOIL’ ಎಂಬ ಸಂಸ್ಥೆಯನ್ನು ಆರಂಭಿಸಿ ಮುನ್ನಡೆಸುತ್ತಿದ್ದರು. ದೇಶದುದ್ದಕ್ಕೂ ಸಂಚರಿಸಿ ಮಣ್ಣಿನ ಕಾರ್ಯಾಗಾರ ಮತ್ತು ತರಬೇತಿಗಳನ್ನು ಏರ್ಪಡಿಸಿ, ಮಣ್ಣಿಗೆ ಜೀವ ತುಂಬುವ ಸುಲಭ ವಿಧಾನಗಳನ್ನು ರೈತರಿಗೆ ಮತ್ತು ಸಂಘ ಸಂಸ್ಥೆಗಳಿಗೆ ತಿಳಿಸಿಕೊಡುತ್ತಿದ್ದರು.‌ ಮಳೆ ಆಶ್ರಿತ ಒಣಭೂಮಿಯಲ್ಲಿ, ಬೆಳೆ ವೈವಿಧ್ಯದ ಸಾಂಪ್ರದಾಯಿಕ ಅಕ್ಕಡಿ ವಿಧಾನವನ್ನು ಜನಪ್ರಿಯಗೊಳಿಸಿದ್ದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.