‘ನಮ್ಮ ಮೆಟ್ರೊ’
– ಪ್ರಜಾವಾಣಿ ಚಿತ್ರ
ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವಾಗ ಮಹಿಳೆಯರು, ಯುವತಿಯರ ಫೋಟೊ ತೆಗೆಯುತ್ತಿದ್ದ ಆರೋಪಿ ಮಹೇಶ್‌ಗೆ ಬಿಎಂಆರ್‌ಸಿಎಲ್ ₹ 5000 ದಂಡ ವಿಧಿಸಿದೆ.
ಡಿ.25ರಂದು ಬೆಳಿಗ್ಗೆ 9ಕ್ಕೆ ಯುವತಿಯೊಬ್ಬರು ಮೆಜೆಸ್ಟಿಕ್‌ನಿಂದ ಜೆ.ಪಿ.ನಗರಕ್ಕೆ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ ಫೋಟೊ ತೆಗೆದಿದ್ದರು. ಇದನ್ನು ಯುವತಿ ಗಮನಿಸಿದ್ದರು. ಆ ವ್ಯಕ್ತಿ ಇದೇ ರೀತಿ ಬೇರೆ ಬೇರೆ ಮಹಿಳೆಯರ ಫೋಟೊ ತೆಗೆಯತೊಡಗಿದ್ದರು. ಯುವತಿ ಬಂದು ಆರೋಪಿಯ ಕಪಾಳಕ್ಕೆ ಹೊಡೆದಿದ್ದಾರೆ. ಅದೇ ಸಮಯದಲ್ಲಿ ಕೆಲಸ ಮುಗಿಸಿ ತೆರಳುತ್ತಿದ್ದ ಬಿಎಂಆರ್‌ಸಿಎಲ್ ಭದ್ರತಾ ಸಿಬ್ಬಂದಿ ಸುಜಿತ್ ಮತ್ತು ಎಸ್.ಜಿ ರಾಮ್ ಬಹದ್ದೂರ್ ತಾಪಾ ಯುವತಿಯ ನೆರವಿಗೆ ಬಂದು ಆರೋಪಿಯನ್ನು ಹಿಡಿದಿದ್ದರು.
ಬಳಿಕ ಆರೋಪಿಯನ್ನು ಜಯನಗರ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ನಮ್ಮ ಮೆಟ್ರೊದಲ್ಲಿ ಫೋಟೊ ತೆಗೆದ ಪ್ರಕರಣಕ್ಕೆ ಬಿಎಂಆರ್‌ಸಿಎಲ್ ₹ 5000 ದಂಡ ವಿಧಿಸಿದೆ.
ಪೊಲೀಸರು ವಿಚಾರಣೆ ನಡೆಸಿದಾಗ ಆಯುರ್ವೇದಿಕ್ ವೈದ್ಯ ಎಂದು ಆರೋಪಿ ತಿಳಿಸಿದ್ದಾನೆ. ತಪ್ಪೊಪ್ಪಿಗೆ ಬರೆಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.