
ಪ್ರಜಾವಾಣಿ ವಾರ್ತೆಅಮಾನತು
ಬೆಂಗಳೂರು: ಕರ್ತವ್ಯ ಲೋಪದ ಆರೋಪದ ಮೇರೆಗೆ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ಆದೇಶಿಸಿದ್ದಾರೆ.
ನಂದಿನಿಲೇಔಟ್ ಠಾಣೆಯ ಎಎಸ್‌ಐ ಶ್ರೀನಿವಾಸ ಮೂರ್ತಿ, ಸುಬ್ರಹ್ಮಣ್ಯನಗರ ಠಾಣೆಯ ಎಎಸ್‌ಐ ಜಯರಾಮೇಗೌಡ ಹಾಗೂ ಕಾನ್‌ಸ್ಟೆಬಲ್ ಧರ್ಮ ಹಾಗೂ ಸಂಜಯನಗರ ಠಾಣೆಯ ಕಾನ್‌ಸ್ಟೆಬಲ್ ನಜೀರ್ ಅಮಾನತುಗೊಂಡ ಸಿಬ್ಬಂದಿ.
ಮೇಲ್ನೋಟಕ್ಕೆ ನಾಲ್ವರೂ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದ್ದು, ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.