ADVERTISEMENT

ಬೆಸ್ಕಾಂ: ಬೆಂಗಳೂರಿನ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 15:59 IST
Last Updated 21 ಡಿಸೆಂಬರ್ 2025, 15:59 IST
ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ   

ಬೆಂಗಳೂರು: ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಡಿ. 22ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಕಂಬೀಪುರ, ಕಾರುಬೆಲೆ, ಎಚ್.ಗೊಲ್ಲಹಳ್ಳಿ, ಕಾಟನಾಯಕನಪುರ, ವರಹಸಂದ್ರ, ಸ್ವಾಮೀಜಿನಗರ, ಅಂಚೆಪಾಳ್ಯ, ಅಪ್ರಮೇಯನಗರ, ಕೃಷ್ಣ ಟೆಂಪಲ್, ಸರ್ಕಾರಿ ಶಾಲೆ, ಪ್ರಾವಿಡೆಂಟ್‌ ಅಪಾರ್ಟ್‌ಮೆಂಟ್, ವಿಬಿಎಚ್‌ಸಿ ಅವಾಟೋಮೆಂಟೋ, ಗುಡ್‌ಅರ್ಥ್, ಶ್ರೀನಿಧಿ ಗ್ರೀನ್ ಲೇಔಟ್, ದೇವಗೆರೆ, ಆನೆಪಾಳ್ಯ, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್‌, ಗ್ಲೋಬಲ್ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 

ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ವಿದ್ಯುತ್‌ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಡಿ. 22ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

ADVERTISEMENT

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:  ಫೋರಂ ಮಾಲ್, ಪ್ರೆಸ್ಟೀಜ್‌ ಪಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣ ನಗರ ಮೂರನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್ಎಸ್ ಶಾಲೆ, ಕೋಣನಕುಂಟೆ ಸರ್ಕಾರಿ ಶಾಲೆ, ಜರಗನಹಳ್ಳಿ, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸಾಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಾರ್ಜುನ್ ಪ್ರೀಮಿಯರ್ ಅಪಾರ್ಟ್‌ಮೆಂಟ್‌, ಚುಂಚಗಟ್ಟ ಗ್ರಾಮ, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.