ADVERTISEMENT

ಬೆಂಗಳೂರು: ‘ಭೂಮಿಕಾ’ದಲ್ಲಿ ಜಾಗೃತಿಯ ಬೆಳಕು

* ‘ಸೆನ್‌’ ಎಸಿಪಿಯಿಂದ ‘ಡಿಜಿಟಲ್‌ ಅರೆಸ್ಟ್‌’ ಕುರಿತು ಮಾತು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
<div class="paragraphs"><p>ಭೂಮಿಕಾ ಕ್ಲಬ್‌ ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ‘ಸೆನ್‌’ ಎಸಿಪಿ ಉಮಾರಾಣಿ ಎಸ್. ಅವರು ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿದರು.&nbsp; </p></div>

ಭೂಮಿಕಾ ಕ್ಲಬ್‌ ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ‘ಸೆನ್‌’ ಎಸಿಪಿ ಉಮಾರಾಣಿ ಎಸ್. ಅವರು ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿದರು. 

   

ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌

ಬೆಂಗಳೂರು: ನಿವೃತ್ತರೇ ಅಧಿಕ ಸಂಖ್ಯೆಯಲ್ಲಿ ‘ಡಿಜಿಟಲ್‌ ಅರೆಸ್ಟ್‌’ ಮೂಲಕ ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ, ಮಹಿಳೆಯರನ್ನು ಕಾಡುವ ಅನಾರೋಗ್ಯದ ವಿವರಗಳು, ನಡುವೆ ಗಮನ ಸೆಳೆವ ನೃತ್ಯಗಳು..

ADVERTISEMENT

ಇಂದಿರಾನಗರ ಕ್ಲಬ್‌ನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಶನಿವಾರ ಆಯೋಜಿಸಿದ್ದ 25ನೇ ಆವೃತ್ತಿಯ ಕಾರ್ಯಕ್ರಮದ ಇಣುಕುನೋಟ ಇದು.

‘ಫ್ರೀಡಂ ಆಯಿಲ್’, ‘ಮಣಿಪಾಲ್ ಆಸ್ಪತ್ರೆಗಳ ಸಮೂಹ’, ‘ಇಕೊ ಕ್ರಿಸ್ಟಲ್‌’ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಘಾಟಕರ ಮಾತು, ಉತ್ತರ ಕರ್ನಾಟಕದ ಅಡುಗೆಯ ‍ಪ್ರಾತ್ಯಕ್ಷಿಕೆಗಳು ಉತ್ಸಾಹ ತುಂಬಿದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ, ಬಿಗ್‌ಬಾಸ್ ಸ್ಪರ್ಧಿ ಅನುಷಾ ರೈ ಮಾತನಾಡಿ, ‘ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ ತಿದ್ದಿಕೊಳ್ಳಲು ಅವಕಾಶ ನೀಡುವ ಟೀಕೆ, ವಿಮರ್ಶೆಗಳು ಬೇಕು. ಆದರೆ, ಸುಮ್ಮನೆ ನಕಾರಾತ್ಮಕವಾಗಿ ಮಾತಾಡುವವರು, ಕೆಟ್ಟದಾಗಿ ಕಮೆಂಟ್‌ ಮಾಡುವವರು ಕೆಲಸ ಇಲ್ಲದವರು. ಅಂಥವುಗಳನ್ನು ನಿರ್ಲಕ್ಷಿಸಬೇಕು‘ ಎಂದರು.

‘ಅಂಥವರನ್ನು ಬ್ಲಾಕ್‌ ಮಾಡಿ, ಸ್ಪಾಮ್‌ ಮಾಡಿ. ಕಿರಿಕಿರಿಯಾದರೆ ದೂರು ನೀಡಿ. ಅದನ್ನು ಬಿಟ್ಟು ನೆಮ್ಮದಿ ಕಳೆದುಕೊಳ್ಳಬೇಡಿ. ಹಿಂದಿನಿಂದ ಮಾತನಾಡುವವರ ಬಗ್ಗೆಯೂ ನಿರ್ಲಕ್ಷ್ಯ ವಹಿಸಿ. ಅವರಿಗಿಂತ ನೀವು ಮುಂದೆ ಇದ್ದೀರಿ ಎಂದುತಿಳಿಯಿರಿ‘ ಎಂದರು.

ಅವಮಾನಗಳನ್ನು ಎದುರಿಸಲು ಕಲಿತರೇ ಮುಂದೆ ಸನ್ಮಾನಗಳ ಸುರಿಮಳೆಯಾಗುತ್ತದೆ. ಅವಮಾನಕ್ಕೆ ಕುದ್ದು ಹೋದರೆ ಜೀವನದಲ್ಲಿ ಸಾಧನೆ ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಪಶ್ಚಿಮ ವಿಭಾಗದ ‘ಸೆನ್‌’ ಎಸಿಪಿ ಉಮಾರಾಣಿ ಎಸ್. ಅವರು ಸೈಬರ್ ಅಪರಾಧದ ಬಗ್ಗೆ ಮಾತನಾಡಿ, ‘ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ಮೂಲಕ ಹಣ ಕಳೆದುಕೊಳ್ಳುವವರಲ್ಲಿ ಶೇ 80ರಷ್ಟು ಮಂದಿ ಹಿರಿಯ ನಾಗರಿಕರು, ನಿವೃತ್ತರು ಆಗಿದ್ದಾರೆ. ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಪೊಲೀಸರು ಯಾವತ್ತೂ ವಿಡಿಯೊ ಮೂಲಕ ವಿಚಾರಣೆ ನಡೆಸುವುದಿಲ್ಲ. ಪೊಲೀಸ್‌ ಹೆಸರಲ್ಲಿ ವಿಡಿಯೊ ಮೂಲಕ ಕರೆ ಬಂದರೆ ಹೆದರಿಕೊಳ್ಳಬೇಡಿ’ ಎಂದು ಮಾಹಿತಿ ನೀಡಿದರು.

‘ಬ್ಯಾಂಕ್‌ ಖಾತೆಗಳನ್ನು ಮಾರಿಕೊಳ್ಳುವವರೂ ಇದ್ದಾರೆ. ವಂಚಕರು ನಿಮ್ಮನ್ನು ಸಂಪರ್ಕಿಸಿ ಒಂದು ಬ್ಯಾಂಕ್‌ ಖಾತೆ ತೆರೆದುಕೊಟ್ಟರೆ ₹ 15,000, ₹ 20,000 ನೀಡುವುದಾಗಿ ಹೇಳಿದಾಗ ದುಡ್ಡಿನ ಆಸೆಗೆ ಚಾಲ್ತಿ ಖಾತೆ ತೆರೆದು ಕೊಡುವವರಿದ್ದಾರೆ. ಆ ಬ್ಯಾಂಕ್‌ನ ನೆಟ್‌ಬ್ಯಾಂಕಿಂಗ್‌ ಮಾಹಿತಿ ಇಟ್ಟುಕೊಳ್ಳುವ ವಂಚಕರು ಯಾರನ್ನೋ ಮೋಸಗೊಳಿಸಿ ನಿಮ್ಮ ಖಾತೆಗೆ ಹಣ ಹಾಕಿಸುತ್ತಾರೆ. ಆನಂತರ ಹಣವನ್ನು ವಂಚಕರು ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.

ಇತ್ತೀಚೆಗೆ ಆಟೊ ಚಾಲಕರೊಬ್ಬರು ಈ ರೀತಿ ಏಳು ಖಾತೆ ಮಾಡಿ ಕೊಟ್ಟಿದ್ದರು. ಪ್ರತಿ ಖಾತೆ ಮಾಡಿದಾಗಲೂ ಇವರಿಗೆ ಸ್ವಲ್ಪ ಹಣ ಬಂದಿದೆ. ಆದರೆ, ಇವರ ಖಾತೆಯ ಮೂಲಕ ಬೇರೆಯವರಿಗೆ ಕೋಟಿ ರೂಪಾಯಿ ವಂಚನೆ ಮಾಡಲಾಗಿತ್ತು. ಆಟೊ ಚಾಲಕ ಜೈಲು ಪಾಲಾದರು. ನೈಜ ವಂಚಕರು ತಪ್ಪಿಸಿಕೊಂಡರು ಎಂದು ವಿವರ ನೀಡಿದರು.

‘ಯಾವುದೇ ಕಾರಣಕ್ಕೆ ಒಟಿಪಿ ನೀಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ತೀರ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ’ ಎಂದರು.

‘ಉತ್ತರ ಕರ್ನಾಟಕ ಅಡುಗೆ ಮನೆ’ ಯೂಟ್ಯೂಬ್‌ನ ತ್ರಿವೇಣಿ ಪಾಟೀಲ ಅವರು ‘ನವಣೆ ಹೋಳಿಗೆ’ಯ ಪ್ರಾತ್ಯಕ್ಷಿಕೆ ನೀಡಿದರು. ಪಾವನಿ ಡಿ. ಮತ್ತು ಭವಾನಿ ಆಕರ್ಷಕ ನೃತ್ಯ ಪ್ರದರ್ಶಿಸಿದರು. ನಿರೂಪಕರಾದ ಆರ್‌.ಜೆ. ಅಕ್ಷಯ್‌ ಮತ್ತು ಸ್ನೇಹಾ ನೀಲಪ್ಪ ಗೌಡ ಪ್ರೇಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿ ಹುರಿದುಂಬಿಸಿದರು. ತಾರಕ್ ಗ್ರೂಪ್‌ ಆಫ್‌ ಡ್ಯಾನ್ಸ್‌ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಉದ್ಯೋಗಿ ಮಹಿಳೆಯರು ಆರೋಗ್ಯ ಕಾಳಜಿ ವಹಿಸಿ

ಉದ್ಯೋಗದಲ್ಲಿರುವ ಮಹಿಳೆಯರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕೆಲಸದ ಜೊತೆಗೆ ಆರೋಗ್ಯ ಕಾಳಜಿ ವಹಿಸಬೇಕು ಎಂದು ಮಣಿಪಾಲ್‌ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸಸಿಕುಮಾರಿ ಎಂ. ತಿಳಿಸಿದರು. ಕೆಲಸ ಮಾಡುವ ಸ್ಥಳದ ವಾತಾವರಣ ಸಂಚಾರ ಸಮಯದ ಮಾಲಿನ್ಯ ವ್ಯಾಯಾಮ ಇಲ್ಲದೇ ಇರುವುದು ಪೌಷ್ಟಿಕ ಆಹಾರ ಸೇವಿಸದಿರುವುದು ಕೆಲಸದ ಒತ್ತಡ ಅಧಿಕ ಕೆಲಸ ತಂಬಾಕು ಪದಾರ್ಥ–ಮದ್ಯ ಸೇವನೆ ಇನ್ನಿತರ ಕಾರಣಗಳು ಸ್ತ್ರಿಯರಲ್ಲಿ ಅನಾರೋಗ್ಯ ಹೆಚ್ಚಳು ಕಾರಣ ಎಂದರು. ಮುಟ್ಟಿನ ವೇಳೆ ವಹಿಸಬೇಕಾದ ಎಚ್ಚರಿಕೆ ವಿವಿಧ ರೀತಿ ಕ್ಯಾನ್ಸರ್‌ಗಳು ಬಾರದಂತೆ ತಡೆಯುವುದು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಎಚ್‌ಪಿವಿ ಲಸಿಕೆ ಪಡೆಯುವುದು ಕುರಿತು ಮಾಹಿತಿ ನೀಡಿದರು.

ನಟಿ ಅನುಷಾ ರೈ ಮಾತನಾಡಿದರು
ತ್ರಿವೇಣಿ ಪಾಟೀಲ ಅವರು ‘ನವಣೆ ಹೋಳಿಗೆ’ಯ ಪ್ರಾತ್ಯಕ್ಷಿಕೆ ನೀಡಿದರು.
ಡಾ. ಸಸಿಕುಮಾರಿ ಎಂ. ಅವರು ‘ಮಹಿಳೆಯರ ಆರೋಗ್ಯ’ ಬಗ್ಗೆ ಮಾಹಿತಿ ನೀಡಿದರು
ಪಾವನಿ ಡಿ. ಮತ್ತು ಭವಾನಿ ನೃತ್ಯ ಪ್ರದರ್ಶಿಸಿದರು. 
ಭೂಮಿಕಾ ಕ್ಲಬ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.