ADVERTISEMENT

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಎಡ್ಯುವರ್ಸ್ ಜ್ಞಾನದೇಗುಲ ಆರಂಭ

​ಪ್ರಜಾವಾಣಿ ವಾರ್ತೆ
Published 25 ಮೇ 2019, 8:44 IST
Last Updated 25 ಮೇ 2019, 8:44 IST
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ವತಿಯಿಂದ ನಡೆಯುತ್ತಿರುವ ಎಡ್ಯುವರ್ಸ್ ಜ್ಞಾನದೇಗುಲದಲ್ಲಿ ಸಿಇಟಿ ಬಗ್ಗೆ ಕೆಇಎ ಪಿಆರ್ ಒ ಎ.ಎಸ್.ರವಿ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ವತಿಯಿಂದ ನಡೆಯುತ್ತಿರುವ ಎಡ್ಯುವರ್ಸ್ ಜ್ಞಾನದೇಗುಲದಲ್ಲಿ ಸಿಇಟಿ ಬಗ್ಗೆ ಕೆಇಎ ಪಿಆರ್ ಒ ಎ.ಎಸ್.ರವಿ ಅವರು ಮಾಹಿತಿ ನೀಡಿದರು.   

ಬೆಂಗಳೂರು: ನಗರದ ಅರಮನೆ ಮೈದಾನ ಸಮೀಪದ ಜಯಮಹಲ್ ಹೋಟೆಲ್ ಬಳಿ ಶನಿವಾರ 11ನೇ ವರ್ಷದ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ವತಿಯಿಂದ ಎಡ್ಯುವರ್ಸ್ ಜ್ಞಾನದೇಗುಲ ಆರಂಭವಾಯಿತು.

ಹಿರಿಯ ಐಎಎಸ್ ಆಧಿಕಾರಿ, ರಾಜ್ಯದ ನಿವೃತ್ತ ಪ್ರಿನ್ಸ್ ಪಲ್ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಇರುವ ವಿವಿಧ ಕಲಿಕಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಕಾಮೆಡ್ ಕೆ ಬಗ್ಗೆ ಪ್ರೊ.ಶಾಂತಾರಾಂ ಹಾಗೂ ಸಿಇಟಿ ಬಗ್ಗೆ ಕೆಇಎ ಪಿಆರ್ ಒ ಎ.ಎಸ್.ರವಿ ಮಾಹಿತಿ ನೀಡಿದರು.
ನೂರಾರು ವಿದ್ಯಾರ್ಥಿಗಳು, ಅವರ ಪೋಷಕರು ಬಂದಿದ್ದಾರೆ.

ADVERTISEMENT

100ಕ್ಕೂ ಅಧಿಕ ಮಳಿಗೆಗಳು ವಿವಿಧ ಕಾಲೇಜುಗಳಲ್ಲಿನ ಕಲಿಕಾ ಅವಕಾಶಗಳನ್ನು ತಿಳಿಸಿಕೊಡುತ್ತಿವೆ.
ಭಾನುವಾರ ಸಂಜೆಯವರೆಗೆ ಇದು ಮುಂದುವರಿಯಲಿದೆ.ವಿವಿಧ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.