ADVERTISEMENT

ಪತ್ರಿಕಾ ವಿತರಕರ ಒಕ್ಕೂಟಕ್ಕೆ ಪ್ರಮೋದ್‌ ಅಧ್ಯಕ್ಷರಾಗಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 23:32 IST
Last Updated 15 ಡಿಸೆಂಬರ್ 2025, 23:32 IST
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನೆಲಮಂಗಲ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನೆಲಮಂಗಲ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು   

ನೆಲಮಂಗಲ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ತಾಲ್ಲೂಕು ಅಧ್ಯಕ್ಷರಾಗಿ ಆರ್.ಪ್ರಮೋದ್‌ಕುಮಾರ್ ಹಾಗೂ ಪ್ರಧಾ‌ನ ಕಾರ್ಯದರ್ಶಿಯಾಗಿ ರಾಮಚಂದ್ರಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ, ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ವಿತರಕರು ಸಂಘಟಿತರಾಗಬೇಕು ಎಂದರು.

ಗೌರವಾಧ್ಯಕ್ಷ–ಬೈಲಪ್ಪ, ಉಪಾಧ್ಯಕ್ಷ– ಶಿವಕುಮಾರ್, ಖಜಾಂಚಿ– ರವೀಶ್, ಸಲಹೆಗಾರ– ಮಹೇಶ್, ನಿರ್ದೇಶಕರಾಗಿ ನಾಗರಾಜು, ರಾಮಣ್ಣ, ಅನ್ಸರ್‌ಬೇಗ್, ಅಶೋಕ್, ರಾಘವೇಂದ್ರ, ಅನಂತರಾಮು, ಮರಿಯಪ್ಪ, ಚಿಕ್ಕರಾಜು, ವಿಜಯ್‌ವೀಳ್ಯದೆಲೆ, ನಾರಾಯಣ್, ನಂದಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್‌ಕುಮಾರ್, ‌ಪ್ರಧಾನ ಕಾರ್ಯದರ್ಶಿ ಸಂಗಮ್‌ ಸುರೇಶ್, ಕಾರ್ಯದರ್ಶಿ ಸುರೇಶ್, ತುಮಕೂರು ಜಿಲ್ಲಾಧ್ಯಕ್ಷ ಚಲುವರಾಜು(ರಘು), ಜಿಲ್ಲಾ ನಿರ್ದೇಶಕ ಆನಂದ್‌ ಜೈನ್, ವಕೀಲ‌ ದಿಲೀಪ್‌ಕುಮಾರ್ ಉಪಸ್ಥಿತರಿದ್ದ‌ರು.‌

ಆರ್‌.ಪ್ರಮೋದ್‌ ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.