ADVERTISEMENT

ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪಂಜಾಬ್, ಹರಿಯಾಣಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 23:32 IST
Last Updated 11 ಫೆಬ್ರುವರಿ 2026, 23:32 IST
69ನೇ ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ವಿಜೇತರೊಂದಿಗೆ ಗಣ್ಯರು
69ನೇ ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ವಿಜೇತರೊಂದಿಗೆ ಗಣ್ಯರು   

ಪೀಣ್ಯ ದಾಸರಹಳ್ಳಿ: ಜಾಲಹಳ್ಳಿಯ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 19 ವಯೋಮಾನದೊಳಗಿನ ಬಾಲಕ-ಬಾಲಕಿಯರ 69ನೇ ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಂಜಾಬ್ ಹಾಗೂ ಹರಿಯಾಣ ತಂಡಗಳು ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಸಮಗ್ರ ಪ್ರಶಸ್ತಿ ಪಡೆದವು.

ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಸಂತ ಕ್ಲಾರೆಟ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಬಾಕ್ಸಿಂಗ್ ಚಾಂಪಿಯನ್‌ಷಿಪ್ ನಡೆಯಿತು.

ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಶಿಕ್ಷಣ ಸಮಿತಿಗಳ ಬಾಲಕರ 37 ತಂಡಗಳು ಹಾಗೂ ಬಾಲಕಿಯರ 35 ತಂಡಗಳಿಂದ ಪ್ರತ್ಯೇಕ ವಿಭಾಗಗಳಲ್ಲಿ 750ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. 

ADVERTISEMENT

ಬೆಂಗಳೂರು ಉತ್ತರ ಜಿಲ್ಲೆಯ ಉಪ ನಿರ್ದೇಶಕ ಫಾಲಾಕ್ಷ ಮಾತನಾಡಿ, ‘ವಿಜೇತ ಕ್ರೀಡಾಪಟುಗಳು ತಮ್ಮ ಭವಿಷ್ಯದ ಕ್ರೀಡಾಬದುಕಿನಲ್ಲಿ ಒಲಿಂಪಿಕ್ಸ್‌ನಂತಹ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸುವ ಮೂಲಕ ರಾಷ್ಟ್ರಕ್ಕೆ ಕೀರ್ತಿ’ ಎಂದು ಹಾರೈಸಿದರು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಲಾಲ್ ಮತ್ತು ಎ. ವೆಂಕಟೇಶ್ವರ ರಾವ್ ಭಾಗವಹಿಸಿದ್ದರು.

ಸಂತ ಕ್ಲಾರೆಟ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ರೆವರೆಂಡ್ ಕ್ಸೇವಿಯರ್ ಇ. ಮನವತ್, ಪ್ರಾಂಶುಪಾಲ ರೆವರೆಂಡ್ ಫಾದರ್ ಮೈಕೆಲ್ ಡಿಸೋಜಾ ಸಿ.ಎಂ.ಎಫ್, ಬೆಂಗಳೂರು ಉತ್ತರ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸಂಧ್ಯಾ ಮೆನೆಜಿಸ್, ಉಪಾಧ್ಯಕ್ಷರಾದ ರೇಣುಕಾ, ಗುರುರಾಜ್ ಎಸ್. ದಾವಣಗೆರೆ, ವೇಣುಗೋಪಾಲ್, ಕಾರ್ಯದರ್ಶಿ ಡಾ. ಕೃಷ್ಣಮೂರ್ತಿ ಆರ್.. ಕ್ರೀಡಾ ಸಂಯೋಜಕ ಮುರಳೀಧರ್ ಎಂ. ಸಹ ಕ್ರೀಡಾ ಸಂಯೋಜಕ ಡಾ. ಗಿರೀಶ್ ಸಿ. ಗೋಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.