
ಯಶವಂತಪುರ ರೈಲು ನಿಲ್ದಾಣದಲ್ಲಿ ನಡೆದ ಗಲಾಟೆಯ ದೃಶ್ಯ
ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಿಂದ ಗೋವಾಕ್ಕೆ ಹೊರಟಿದ್ದ ಯಶವಂತಪುರ– ವಾಸ್ಕೋಡ ಗಾಮ ಎಕ್ಸ್‌ಪ್ರೆಸ್ (17309) ರೈಲಿನ ಚೈನ್ ಎಳೆದು ರಾದ್ಧಾಂತ ನಡೆಸಲಾಗಿದ್ದು, ಪ್ರಶ್ನಿಸಲು ಹೋದ ಕ್ಷಿಪ್ರ ಕಾರ್ಯ ಪಡೆಯ ಸಿಬ್ಬಂದಿ ಮೇಲೆ ಸೋಮವಾರ ಹಲ್ಲೆ ನಡೆಸಲಾಗಿದೆ.
ಕೆಲವು ಪುಂಡರು ಈ ರೀತಿಯ ವರ್ತನೆ ತೋರಿದ್ದು, ಆರೋಪಿಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈಲು ತಡೆದು ಹಲ್ಲೆ ಮಾಡಿದ ಆರೋಪದಡಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
‘ರೈಲಿನ ಎಸ್–3 ಬೋಗಿಯಲ್ಲಿ ಘಟನೆ ನಡೆದಿದೆ. ಆ ಬೋಗಿಯಲ್ಲಿ 14 ಮಂದಿ ಪ್ರಯಾಣಿಕರು ಇದ್ದರು. ಪುಂಡರು ರಾದ್ಧಾಂತ ನಡೆಸುತ್ತಿರುವುದನ್ನು ಅವರು ಪ್ರಶ್ನಿಸಿದ್ದರು. ಅವರ ಮಾತನ್ನು ಆರೋಪಿಗಳು ಕೇಳಿಸಿಕೊಂಡಿಲ್ಲ. ಪ್ರಯಾಣಿಕರು ನೀಡಿದ ಮಾಹಿತಿ ಮೇರೆಗೆ ಆ ಬೋಗಿಗೆ ತೆರಳಿ ಪರಿಶೀಲನೆ ನಡೆಸಿದಾಗ ಆರ್‌ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮದ್ಯದ ನಶೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ.
ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.