ADVERTISEMENT

ಬೆಂಗಳೂರು: ಹಲವೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:42 IST
Last Updated 6 ಮಾರ್ಚ್ 2020, 19:42 IST
ಬ್ರಿಗೇಡ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಮಳೆ ಸುರಿದ ವೇಳೆ ರಕ್ಷಣೆ ಪಡೆಯಲು ಮಹಿಳೆಯೊಬ್ಬರು ತಲೆ ಮೇಲೆ ಚೀಲವನ್ನಿಟ್ಟುಕೊಂಡು ಸಾಗಿದರು – ಪ್ರಜಾವಾಣಿ ಚಿತ್ರ 
ಬ್ರಿಗೇಡ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಮಳೆ ಸುರಿದ ವೇಳೆ ರಕ್ಷಣೆ ಪಡೆಯಲು ಮಹಿಳೆಯೊಬ್ಬರು ತಲೆ ಮೇಲೆ ಚೀಲವನ್ನಿಟ್ಟುಕೊಂಡು ಸಾಗಿದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದು, ಶುಕ್ರವಾರ ರಾತ್ರಿ ಹಲವೆಡೆ ಮಳೆ ಸುರಿಯಿತು.

ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಮೆಜೆಸ್ಟಿಕ್, ಸಂಪಂಗಿ ರಾಮನಗರ, ಎಂ.ಜಿ.ರಸ್ತೆ, ಶಿವಾಜಿನಗರ, ಅಶೋಕನಗರ, ವಿಲ್ಸನ್ ಗಾರ್ಡನ್ ಹಾಗೂ ಸುತ್ತಮುತ್ತ ಜಿಟಿ ಜಿಟಿ ಮಳೆ ಆಯಿತು.

ಬೆಳಿಗ್ಗೆಯಿಂದಲೇನಗರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಸಂಜೆ ವೇಳೆಗೆ ಬಿಸಿಲು ಕಡಿಮೆ ಆಗಿ ಮೋಡ ಮುಸುಕಿದ ವಾತಾವರಣ ಕಂಡುಬಂತು. ನಂತರ, ಜಿನುಗು ಮಳೆ ಶುರುವಾಯಿತು. ತಡರಾತ್ರಿಯವರೆಗೂ ಕೆಲವೆಡೆ ಮಳೆ ಇತ್ತು.

ADVERTISEMENT

‘ನಗರದ ಎಲ್ಲಿಯೂ ಜೋರು ಮಳೆ ಆಗಿಲ್ಲ. ಯಾವುದೇ ಹಾನಿ ಸಂಭವಿಸಿದ್ದ ಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ಚಳಿ ಕ್ರಮೇಣ ಕಡಿಮೆ ಆಗುತ್ತಿದ್ದು, ಬಿಸಿಲು ಜಾಸ್ತಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಹಗುರ ಮಳೆಯಾಗುವುದು ಸಾಮಾನ್ಯ. ಬೆಂಗಳೂರಿನಲ್ಲಿ ಇನ್ನೊಂದು ದಿನವೂ ಹಗುರವಾದ ಮಳೆ ಬೀಳಲಿದೆ’ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.