ADVERTISEMENT

ಆರ್‌.ಆರ್‌.ನಗರ ಉಪಚುನಾವಣೆ; ಕೆಲವೆಡೆ ಮತಯಂತ್ರಗಳಲ್ಲಿ ದೋಷ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 4:43 IST
Last Updated 3 ನವೆಂಬರ್ 2020, 4:43 IST
ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್
ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್   

ಬೆಂಗಳೂರು: ‘ಅಣುಕು ಮತದಾನದಲ್ಲಿ ಒಂದಷ್ಟು ದೋಷ ಕಂಡುಬಂದಿದ್ದು ಸರಿಪಡಿಸಲಾಗಿದೆ. ಒಂಬತ್ತು ಕಂಟ್ರೋಲ್ ಯುನಿಟ್ ಬದಲಾಯಿಸಿದ್ದೇವೆ. 3 ವಿವಿ ಪ್ಯಾಡ್, 14 ಮತಯಂತ್ರಗಳನ್ನು ಬದಲಾಯಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದರು.

‘ಕೋವಿಡ್ ಸೋಂಕಿತರಿಗೆ ಕರೆ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿದ್ದೇವೆ. ಆ ಪೈಕಿ, 27 ಮಂದಿ ಮತ ಹಾಕಲು ಒಪ್ಪಿದ್ದಾರೆ. 12 ಸೋಂಕಿತರು ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ಪಿಪಿಇ ಕಿಟ್ ಹಾಕಿಸಿ ಮತ ಹಾಕಿಸುತ್ತೇವೆ’ ಎಂದೂ ಹೇಳಿದರು.

‘ಪ್ರತಿ ಮತಗಟ್ಟೆಗಳಲ್ಲಿ ಕೋವಿಡ್ ನಿಯಮ ಪಾಲಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಇದ್ದಾರೆ. ಸ್ಯಾನಿಟೈಸರ್ ವ್ಯವಸ್ಥೆ, ಕೈಗೆ ಗ್ಲೋಸ್ ವ್ಯವಸ್ಥೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ’ ಎಂದರು.

ADVERTISEMENT

ಇಲ್ಲಿ 9 ಗಂಟೆ ಸುಮಾರಿಗೆ ಶೇ 9 ರಷ್ಟು ಮತದಾನವಾಗಿದೆ.

‘ಮತದಾನದ 40 ಸ್ಥಳಗಳಲ್ಲಿ ಒಂದೇ ಜಾಗದಲ್ಲಿ ಕುಳಿತು ನೋಡಬಹುದಾದ ವ್ಯವಸ್ಥೆ ಇದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮೈಕ್ರೋ ಅಬ್ಸರ್ವರ್ ಇದ್ದಾರೆ’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.