ADVERTISEMENT

ರಾಜರಾಜೇಶ್ವರಿನಗರ: ಸಂಕ್ರಾಂತಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 20:24 IST
Last Updated 9 ಜನವರಿ 2026, 20:24 IST
ಎಸ್.ಟಿ.ಸೋಮಶೇಖರ್ ಅವರೆಕಾಯಿ ರಾಶಿಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿದರು. ಅನುಪಮಾ ಪಂಚಾಕ್ಷರಿ, ಸುಮಾ ಜನಾರ್ಧನ್, ಇ.ದೊಡ್ಡನಾಗಯ್ಯ, ಟಿ.ಎಲ್.ಕೆಂಪೇಗೌಡ, ಚಿಕ್ಕರಾಜು, ಮೈಲಸಂದ್ರ ನಾಗರಾಜು ಉಪಸ್ಥಿತರಿದ್ದರು
ಎಸ್.ಟಿ.ಸೋಮಶೇಖರ್ ಅವರೆಕಾಯಿ ರಾಶಿಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿದರು. ಅನುಪಮಾ ಪಂಚಾಕ್ಷರಿ, ಸುಮಾ ಜನಾರ್ಧನ್, ಇ.ದೊಡ್ಡನಾಗಯ್ಯ, ಟಿ.ಎಲ್.ಕೆಂಪೇಗೌಡ, ಚಿಕ್ಕರಾಜು, ಮೈಲಸಂದ್ರ ನಾಗರಾಜು ಉಪಸ್ಥಿತರಿದ್ದರು   

ರಾಜರಾಜೇಶ್ವರಿನಗರ: ಮಾಗಡಿ ಮುಖ್ಯರಸ್ತೆಯ ಬಿಇಎಲ್ ಲೇಔಟ್‌ನಲ್ಲಿ ಗ್ರಾಮೀಣ ಸೊಗಡಿನ ಸಂಕ್ರಾಂತಿಯ ಉತ್ಸವಕ್ಕೆ ಶಾಸಕ ಎಸ್.ಟಿ.ಸೋಮಶೇಖರ್‌ ಚಾಲನೆ ನೀಡಿದರು.

ಉತ್ಸವದ ಸುಗ್ಗಿ ಕಾರ್ಯಕ್ರಮದಲ್ಲಿ ಯಶವಂತಪುರ ಕ್ಷೇತ್ರದ ವ್ಯಾಪ್ತಿಯ ನಗರ ಪಾಲಿಕೆ, 17 ಗ್ರಾಮ ಪಂಚಾಯಿತಿಯ ನಾಗರಿಕರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಉಚಿತವಾಗಿ ಕಡಲೆಕಾಯಿ, ಅವರೆಕಾಯಿ, ಕಬ್ಬು, ಗೆಣಸು ನೀಡಲಾಗುತ್ತದೆ ಎಂದರು.

ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿಕ್ಕರಾಜು, ಮೈಲಸಂದ್ರ ನಾಗರಾಜ್, ರೇವಣಸಿದ್ದಯ್ಯ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಇ.ದೊಡ್ಡ ನಾಗಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸುಮಾ ಜನಾರ್ಧನ್, ಕೆಂಪಣ್ಣ, ಶ್ವೇತಾಗೌಡ, ಅನುಪಮಾ ಪಂಚಾಕ್ಷರಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.