ADVERTISEMENT

ಬೆಂಗಳೂರು | ಯಶಸ್ಸಿಗೆ ಕೃತಕ ಬುದ್ಧಿಮತ್ತೆ ಸಾಧನ: ಪ್ರೊ. ಎಂ.ವಿ. ರಾಜೀವ್ ಗೌಡ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 19:09 IST
Last Updated 11 ಜನವರಿ 2026, 19:09 IST
ಕಾರ್ಯಕ್ರಮದಲ್ಲಿ ಎಂ.ವಿ. ರಾಜೀವ್ ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ.ವಿ. ರಾಜೀವ್ ಗೌಡ ಮಾತನಾಡಿದರು.   

ಬೆಂಗಳೂರು: ‘ವಿದ್ಯಾರ್ಥಿಗಳು ತಮ್ಮ ಮಹತ್ವಾಕಾಂಕ್ಷೆಗಳಿಗೆ ಕಾವಲಾಗಿ ನಿಂತು, ಛಲಬಿಡದೆ ಸತತ ಪ್ರಯತ್ನದಿಂದ ಯಶಸ್ಸು ಗಳಿಸಬೇಕು’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಪ್ರೊ. ಎಂ.ವಿ. ರಾಜೀವ್ ಗೌಡ ಹೇಳಿದರು.

ಬಾಲ್ಕ್ (ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್‌ ಆ್ಯಂಡ್ ಕಮ್ಯುನಿಕೇಷನ್‌) ಸಂಸ್ಥೆಯ ವತಿಯಿಂದ ನಗರದಲ್ಲಿ ಭಾನುವಾರ ನಡೆದ ‘ಬಾಲ್ಕ್ ಸಂಕಲ್ಪ –2026’, ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರಕವಿ ಕುವೆಂಪು ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮೂಲಕ, ಬಾಲ್ಕ್ ಸಂಸ್ಥೆಯು ಮುಂದಿನ ಹಂತಕ್ಕೆ ಬೆಳೆದು ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿ’ ಎಂದು ಅವರು ಆಶಿಸಿದರು.

ADVERTISEMENT

ಡಿಐಜಿ ಅಹ್ಮದ್ ಅಸಾದ್ ಮಾತನಾಡಿ, ‘ಬಾಲ್ಕ್ ಸಂಸ್ಥೆಯ ವಿದ್ಯಾರ್ಥಿಗಳು ಕೇವಲ ಗುರಿ ಹೊಂದುವುದಷ್ಟೇ ಅಲ್ಲ, ಬದುಕಿನಲ್ಲಿ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾಮಿ ವಿವೇಕಾನಂದರಂತೆ ಮೇರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಬಾಲ್ಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಎನ್. ನಟರಾಜ್ ಗೌಡ ಅಧ್ಯಕ್ಷತೆ ವಹಿಸಿದ್ದರು. 

ಬಾಲ್ಕ್ ನಿರ್ದೇಶಕಿ ಆಶಾರಾಣಿ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ‌ರಮಾಕಾಂತ್, ಐಐಟಿ ಚೆನ್ನೈನ ಅಮರೇಶ್, ಬಾಲ್ಕ್ ಸಂಸ್ಥೆಯ ವಿವಿಧ ಶಾಖಾ ನಿರ್ದೇಶಕರು, ಸಿಬ್ಬಂದಿ ಹಾಜರಿದ್ದರು. ‌ಕೌಶಲ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.