ADVERTISEMENT

‘ರೇವಾ ನೆಸ್ಟ್‌’ ಯೋಜನೆಗೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 18:09 IST
Last Updated 27 ಫೆಬ್ರುವರಿ 2021, 18:09 IST
ಡಾ.ಪಿ.ಶ್ಯಾಮರಾಜು ಅವರು ರೇವಾ ಸಿಇಟಿ-2021ರ ನೂತನ ಲಾಂಛನ ಅನಾವರಣಗೊಳಿಸಿದರು. ಡಾ.ಎಂ.ಧನಂಜಯ, ಡಾ.ಎನ್.ರಮೇಶ್, ಡಾ.ಕಿರಣ್ ಕುಮಾರಿ ಪಾಟೀಲ ಇದ್ದರು.
ಡಾ.ಪಿ.ಶ್ಯಾಮರಾಜು ಅವರು ರೇವಾ ಸಿಇಟಿ-2021ರ ನೂತನ ಲಾಂಛನ ಅನಾವರಣಗೊಳಿಸಿದರು. ಡಾ.ಎಂ.ಧನಂಜಯ, ಡಾ.ಎನ್.ರಮೇಶ್, ಡಾ.ಕಿರಣ್ ಕುಮಾರಿ ಪಾಟೀಲ ಇದ್ದರು.   

ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ನವೋದ್ಯಮಗಳನ್ನು ಆರಂಭಿಸಲು ವೇದಿಕೆ ಕಲ್ಪಿಸುವ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ‘ರೇವಾ ನೆಸ್ಟ್’ ಯೋಜನೆಗೆ ಚಾಲನೆ ನೀಡಲಾಯಿತು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು, ಕಂಪನಿಗಳ ಪ್ರತಿನಿಧಿಗಳೊಂದಿಗೆ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿತು.

ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ‘ಎರಡೂವರೆ ವರ್ಷಗಳ ಹಿಂದೆಯೇ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಇಂದು 10 ನವೋದ್ಯಮಗಳ ಜೊತೆಗೆ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳ ಮೂಲಕ ‘ರೇವಾ ನೆಸ್ಟ್’ನ ನವೋದ್ಯಮಗಳು ₹1ಕೋಟಿಯಷ್ಟು ನಿಧಿ ಪಡೆದುಕೊಂಡಿದ್ದು, ಕಂಪನಿಗಳಿಗೆ ಅಗತ್ಯ ವ್ಯವಸ್ಥೆ, ಜಾಗ ಹಾಗೂ ಪ್ರೋತ್ಸಾಹ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ನೂತನವಾಗಿ ಉದ್ಯಮ ಆರಂಭಿಸುವವರಿಗೆ ಕಡಿಮೆ ಬಂಡವಾಳದಲ್ಲಿ ತಾವು ಸಿದ್ಧಪಡಿಸಬೇಕೆಂದುಕೊಂಡಿರುವ ಯೋಜನೆಯನ್ನು ಅನುಷ್ಠಾನಗೊಳಿಸಲು ಇದರಿಂದ ಅನುಕೂಲವಾಗಲಿದೆ’ ಎಂದರು.

‘ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಷಯಗಳ ಅದ್ಯಯನದಲ್ಲಿ ತೊಡಗಿರುವ 7 ಸಾವಿರ ವಿದ್ಯಾರ್ಥಿಗಳೂ ಸೇರಿದಂತೆ ನಿರ್ವಹಣೆ, ವಿಜ್ಞಾನ, ಕಾನೂನು, ವಾಸ್ತುಶಿಲ್ಪ ಮತ್ತಿತರ ವಿಷಯಗಳನ್ನು ಕಲಿಯುತ್ತಿರುವ ಸುಮಾರು 15 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಅನುಕೂಲವಾಗುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್.ರಮೇಶ್, ‘ರೇವಾ ನೆಸ್ಟ್’ ಯೋಜನೆಯ ನಿರ್ದೇಶಕಿ ಡಾ.ಕಿರಣ್ ಕುಮಾರಿ ಪಾಟೀಲ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.