
ವಕುಮಾರ್
ಬೆಂಗಳೂರು: ಸಂಗೀತ ನಿರ್ದೇಶಕ ರಿಕಿ ಕೇಜ್ ಅವರ ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ನೀಲಸಂದ್ರದ ಶಿವಕುಮಾರ್ (19) ಬಂಧಿತ ಆರೋಪಿ. ಆರೋಪಿ ಗುಜರಿ ವ್ಯಾಪಾರ ಮಾಡುತ್ತಿದ್ದ, ಕದ್ದ ಮುಚ್ಚಳವನ್ನು ₹700ಕ್ಕೆ ಮಾರಾಟ ಮಾಡಿದ್ದ. ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬುದಾಗಿ ರಿಕಿ ಕೇಜ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಆರೋಪಿಗಳು ಕೃತ್ಯ ಎಸಗುತ್ತಿರುವ ದೃಶ್ಯಾವಳಿ ವಿಡಿಯೊಗಳನ್ನು ತಮ್ಮ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು.
ಡಿ.12ರ ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿತ್ತು. ಇಬ್ಬರು ಯುವಕರು ಬಂದು ಗೇಟ್ ಎದುರು ಸ್ಕೂಟರ್ ನಿಲುಗಡೆ ಮಾಡಿದ್ದರು. ಆದಾದ ಮೇಲೆ ಒಬ್ಬ ನಿಧಾನವಾಗಿ ಗೇಟ್ ತೆರೆದು, ಒಳಗೆ ಹೋಗಿ ಸಂಪ್‌ಗೆ ಅಳವಡಿಸಿದ್ದ ಕಬ್ಬಿಣದ ಮುಚ್ಚಳವನ್ನು ಕಳವು ಮಾಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.