ADVERTISEMENT

ಯಲಹಂಕ: ರಸ್ತೆಗಳ ಮರು ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 17:51 IST
Last Updated 29 ಏಪ್ರಿಲ್ 2025, 17:51 IST
ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಮುಖ್ಯರಸ್ತೆಯ ನಿರಂತರ ಲೇಔಟ್‌ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡರಾದ ಎಚ್‌.ಎ.ಶಿವಕುಮಾರ್‌, ಶುಕೂರ್‌ ಅಹಮದ್‌ ಖಾನ್‌, ವೆಂಕಟೇಶ್‌, ಮೋಹನ್‌ ರಾಜ್‌, ಕೃಷ್ಣಪ್ಪ ಇತರರು ಇದ್ದರು.
ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಮುಖ್ಯರಸ್ತೆಯ ನಿರಂತರ ಲೇಔಟ್‌ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಕಾಂಗ್ರೆಸ್‌ ಮುಖಂಡರಾದ ಎಚ್‌.ಎ.ಶಿವಕುಮಾರ್‌, ಶುಕೂರ್‌ ಅಹಮದ್‌ ಖಾನ್‌, ವೆಂಕಟೇಶ್‌, ಮೋಹನ್‌ ರಾಜ್‌, ಕೃಷ್ಣಪ್ಪ ಇತರರು ಇದ್ದರು.   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸಂಜೀವಿನಿನಗರ ಮುಖ್ಯರಸ್ತೆ, ಜಕ್ಕೂರಿನ ಎಂಸಿಇಸಿಎಚ್‌ಎಸ್‌ ಬಡಾವಣೆ 2ನೇ ಹಂತ ಹಾಗೂ ಬಾಗಲೂರು ಮುಖ್ಯರಸ್ತೆಯ ನಿರಂತರ ಲೇಔಟ್‌ ಪ್ರದೇಶಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಈ ಹಿಂದೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಅದರಲ್ಲಿ ಕೆಲವು ರಸ್ತೆಗಳು ಹಾಳಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಸ್ಥಳೀಯರ ಮನವಿಯ ಮೇರೆಗೆ ಅಂತಹ ರಸ್ತೆಗಳನ್ನು ಗುರುತಿಸಿ, ಡಾಂಬರುಹಾಕಿ ಅಭಿವೃದ್ಧಿಪಡಿಸುವ ಕಾಮಗಾರಿಯ ಮುಂದುವರಿದ ಭಾಗವಾಗಿ ಈ ಮೂರು ಬಡಾವಣೆಗಳಲ್ಲಿ ರಸ್ತೆಗಳನ್ನು ಮರು ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಚ್‌.ಎ.ಶಿವಕುಮಾರ್‌, ಟಿ.ರಮೇಶ್‌, ಚಿರಂಜೀವಿ, ವಿಶ್ವ, ಚನ್ನಕೇಶವ, ಶುಕೂರ್‌ ಅಹಮದ್‌ ಖಾನ್‌, ವೆಂಕಟೇಶ್‌, ಮೋಹನ್‌ ರಾಜ್‌, ಕೃಷ್ಣಪ್ಪ, ರಮಾ, ಶಿವಮ್ಮ, ಎಂಸಿಇಸಿಎಚ್‌ಎಸ್‌ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಶ್‌.ಇ.ಬಿ, ಬಿಬಿಎಂಪಿ ಸಹಾಯಕ ಎಂಜಿನಿಯರ್‌ಗಳಾದ ಮಹಾಂತೇಶ್‌, ಅಬಿಷೇಕ್‌ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.