ADVERTISEMENT

ಬೆಂಗಳೂರು: ಆಗಸ್ಟ್‌ 18ರವರೆಗೆ ರುದ್ರಾಕ್ಷಿಗಳ ಪ್ರದರ್ಶನ, ಮಾರಾಟ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 18:48 IST
Last Updated 10 ಆಗಸ್ಟ್ 2025, 18:48 IST
   

ಬೆಂಗಳೂರು: ಹೈದರಾಬಾದ್‌ನ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆಯು ಜೆ.ಪಿ.ನಗರದ ಸಿಆರ್ ಲೇಔಟ್‌ನಲ್ಲಿರುವ ಹೋಟೆಲ್‌ ಲೆ ಫೋಲಿಜ್ ಬೈ ಟಿಜಿಐನಲ್ಲಿ ಹಮ್ಮಿಕೊಂಡಿರುವ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭಾನುವಾರ ಚಾಲನೆ ದೊರೆಯಿತು. 

ಈ ಪ್ರದರ್ಶನ ಮತ್ತು ಮಾರಾಟವು ಇದೇ 18ರವರೆಗೆ ನಡೆಯಲಿದೆ. ‘ಭೂಮಿ ಮೇಲೆ ವಿರಳವಾಗಿ ದೊರಕುವ ರತ್ನದ ಹರಳುಗಳು ಸಹ ಈ ಮೇಳದಲ್ಲಿ ಲಭ್ಯ. ದುಂಡುಮುಖದ ಒಂದು ಮುಖಿ ರುದ್ರಾಕ್ಷಿಯನ್ನೂ (ಸುಮಾರು ₹ 4.5 ಲಕ್ಷ ಬೆಲೆ) ಪ್ರದರ್ಶನದಲ್ಲಿ ಕಾಣಬಹುದು. ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರ ತಿಳಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ಹೇಳಿದ್ದಾರೆ.

‘ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆಯನ್ನೂ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡು ವುದರಲ್ಲಿ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ. ಆಸಕ್ತರಿಗೆ ವಿವಿಧ ಮುಖಗಳ ರುದ್ರಾಕ್ಷಿಗಳನ್ನು ತರಿಸಿ ಕೊಡಲಾಗುವುದು. ವ್ಯಕ್ತಿಯ ಜನ್ಮದಿನಾಂಕ ಆಧರಿಸಿ ಯಾವ ರಾಶಿಗೆ ಯಾವ ಮುಖದ ರುದ್ರಾಕ್ಷಿ ಸೂಕ್ತ ಎಂದು ನಿರ್ಧರಿಸಿ, ಆ ಪ್ರಕಾರದ ರುದ್ರಾಕ್ಷಿ ಕೊಡಲಾಗುವುದು. ಬೆಳಿಗ್ಗೆ 10.30 ರಿಂದ ರಾತ್ರಿ 9 ಗಂಟೆವರೆಗೆ ಪ್ರದರ್ಶನ ನಡೆಯುತ್ತದೆ’ ಎಂದು ತಿಳಿಸಿದ್ದಾರೆ. 

ADVERTISEMENT

ಸಂಪರ್ಕಕ್ಕೆ: 7097296666

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.