ADVERTISEMENT

ನೆಲಮಂಗಲ: ರುದ್ರೇಶ್ವರ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:24 IST
Last Updated 16 ಫೆಬ್ರುವರಿ 2026, 16:24 IST
ಪೇಟೆಬೀದಿ ರುದ್ರೇಶ್ವರ ಸ್ವಾಮಿ ತೇರು
ಪೇಟೆಬೀದಿ ರುದ್ರೇಶ್ವರ ಸ್ವಾಮಿ ತೇರು   

ನೆಲಮಂಗಲ: ಪಟ್ಟಣದ ಪೇಟೇಬೀದಿ ರುದ್ರೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ವೀರಗಾಸೆ, ನಂದಿಕೋಲು, ಡೊಳ್ಳು ಕುಣಿತ ರಥೋತ್ಸವಕ್ಕೆ ಮೆರಗು ತಂದವು. ಭಕ್ತರು ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ನೆರೆದಿದ್ದವರಿಗೆ ವಿತರಿಸಿದರು.

ಶಿವರಾತ್ರಿಯಿಂದಲೆ ರಥೋತ್ಸವದ ವಿವಿಧ ದೈವಿಕ ಕಾರ್ಯಕ್ರಮಗಳು ನಡೆದಿದ್ದು, ಬುಧವಾರ ಕೊನೆಗೊಳ್ಳಲಿದೆ. ಮಂಗಳವಾರ ಮಧ್ಯಾಹ್ನ ವೃಷಭ ಲಗ್ನದಲ್ಲಿ ತೇರನ್ನು ಎಳೆಯುತ್ತಿದ್ದಂತೆ ಭಕ್ತರ ಜೈಕಾರ ಮುಗಿಲು ಮುಟ್ಟಿತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರುದ್ರೇಶ್ವರ ದೇವಾಲಯ ಸಮಿತಿ, ರುದ್ರೇಶ್ವರ ತರುಣ ಸಂಘ, ವೀರಸೈವ ಸಮಾಜ ಹಾಗು ವಿವಿಧ ಸಂಘಟನೆಗಳು ಉಸ್ತುವಾರಿ ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.