ADVERTISEMENT

ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ: ಇಂದು ‘ಮಾಹೆಥಾನ್ 2026’ ಓಟ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 19:03 IST
Last Updated 24 ಜನವರಿ 2026, 19:03 IST
ಮಾಹೆಥಾನ್‌ ಕ್ಯೂಆರ್‌ ಕೋಡ್‌
ಮಾಹೆಥಾನ್‌ ಕ್ಯೂಆರ್‌ ಕೋಡ್‌   

ಬೆಂಗಳೂರು: ‌‘ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ’ ಎಂಬ ಧ್ಯೇಯದೊಂದಿಗೆ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯವು ಜ.25ರಂದು ‘ಮಾಹೆಥಾನ್ 2026’ ಓಟ ಹಮ್ಮಿಕೊಂಡಿದೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಮಾಧ್ಯಮ ಸಹಯೋಗದಲ್ಲಿ, ಆಕ್ಸಿಸ್ ಬ್ಯಾಂಕ್ ಸಹಕಾರದೊಂದಿಗೆ 'ಮಾಹೆಥಾನ್ 2026'ರಲ್ಲಿ 21.1 ಕಿ.ಮೀ. ಹಾಫ್ ಮ್ಯಾರಥಾನ್, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಫನ್ ರನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.  

ಯಲಹಂಕದಲ್ಲಿರುವ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಆರಂಭವಾಗುವ ಓಟವು ಅಲ್ಲೇ ಮುಕ್ತಾಯಗೊಳ್ಳಲಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ‘ಎಐಎಂಎಸ್‌ ಪ್ರಮಾಣೀಕೃತ’ ಮಾರ್ಗದಲ್ಲಿ ಓಟ ನಡೆಯಲಿದೆ. ನುರಿತ ಓಟಗಾರರು, ಹವ್ಯಾಸಿ ಓಟಗಾರರು ಭಾಗವಹಿಸಲಿದ್ದಾರೆ.

ADVERTISEMENT

‘ಮಾಹೆಥಾನ್ 2026 ಕೇವಲ ಓಟವಷ್ಟೇ ಅಲ್ಲ, ಇದೊಂದು ಆಂದೋಲನ. ಆರೋಗ್ಯ, ಸುಸ್ಥಿರತೆ ಮತ್ತು ಪರಿಸರ ಕಾಳಜಿಯ ಅಡಿ ಸಾವಿರಾರು ಓಟಗಾರರನ್ನು ಒಗ್ಗೂಡಿಸುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಿಸುವತ್ತ ಅರ್ಥಪೂರ್ಣ ಹೆಜ್ಜೆ ಇಡುತ್ತಿದ್ದೇವೆ’ ಎಂದು ಸಮ ಕುಲಪತಿ ಮಧು ವೀರರಾಘವನ್ ತಿಳಿಸಿದರು.

ವಿದ್ಯಾರ್ಥಿಗಳು, ಕಾರ್ಪೊರೇಟ್ ಉದ್ಯೋಗಿಗಳು ಸೇರಿ ಆಸಕ್ತರು ನೋಂದಾಯಿಸಿಕೊಳ್ಳಬಹುದು. ವಿವರಗಳು ಮತ್ತು ನೋಂದಣಿಗೆ ವೆಬ್‌ಸೈಟ್‌ https://www.mahethon.in/ ಭೇಟಿ ನೀಡಬಹುದು ಅಥವಾ ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.