ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಬಂಡಾಪುರದ ಗ್ರಾಮದಲ್ಲಿ 10 ಎಕರೆ ಜಮೀನು ಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪದಡಿ ಸತ್ವ ಗ್ರೂಪ್‌ನ ಪಾಲುದಾರ ಅಶ್ವಿನ್ ಸಂಚೆಟಿ ಅವರನ್ನು ಆವಲಹಳ್ಳಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಮೂಲ ಮಾಲೀಕರಾದ ರಾಧಾ ಅವರ ಬಳಿ ಜಿಪಿಎ ಪಡೆದಿರುವ ವೆಂಕಟಪ್ಪ ಅವರು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ದೂರು ಆಧರಿಸಿ ಆರೋಪಿಗಳಾದ ಅಶ್ವಿನ್ ಸಂಚೆಟಿ, ಬಸವೇಶ್ವರ ನಗರದ ನಿವಾಸಿ ರಾಧಾ, ಲೋಕ ಸುಂದರ್, ಧ್ರುವ ಕುಮಾರ್, ಮೀನಾಕ್ಷಿ, ಲಾವಣ್ಯ, ಡಾಲರ್ಸ್ ಕಾಲೊನಿಯ ನಿವಾಸಿ ರಾಧಾ, ವೆಂಟಕರಾಮ ನಾಯ್ಡು ಕೋಲ, ಶಿವಶ್ರೀ ಮೀಡಿಯಾ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವರುದ್ರಪ್ಪ, ನಿರ್ದೇಶಕ ಶ್ರೀನಿವಾಸ್ ಆರ್. ಅಲಕಟ್ಟಿ, ಲಿಂಗರಾಜ್, ಮಧುಸೂದನ್ ಮತ್ತು ಮುನೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
10 ಎಕರೆ ಜಮೀನನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ವೆಂಕಟಪ್ಪ ಎಂಬುವವರು ಅ.22ರಂದು ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.