ADVERTISEMENT

ಗೋವಾದಲ್ಲಿ ನಡೆದ ರಾಜಕೀಯ ನಾಯಕರ ಪಕ್ಷಾಂತರ ಹಾಸ್ಯಾಸ್ಪದ: ಬಿ.ಕೆ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 4:32 IST
Last Updated 18 ಸೆಪ್ಟೆಂಬರ್ 2022, 4:32 IST
ಬಿ.ಕೆ. ಚಂದ್ರಶೇಖರ್
ಬಿ.ಕೆ. ಚಂದ್ರಶೇಖರ್   

ಬೆಂಗಳೂರು: ‘ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ನಾಯಕರ ಪಕ್ಷಾಂತರಗಳು ಹಾಸ್ಯಾಸ್ಪದವಾಗಿವೆ. ಆ ಮೂಲಕ, ‘ಪ್ರಜಾಪ್ರಭುತ್ವದ ತಾಯಿ’ ಎಂದೇ ಗುರುತಿಸಿಕೊಂಡ ನೆಲದಲ್ಲಿ ಚುನಾವಣೆ ಮತ್ತು ಅದರ ಫಲಿತಾಂಶ ಅಪ್ರಸ್ತುತವಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

‘ನಾನು ಜನವರಿಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಕಾಂಗ್ರೆಸ್‌ ತ್ಯಜಿಸದಂತೆ ದೇವರು ಆದೇಶ ಮಾಡಿದ್ದರಿಂದ ಅವರ ಆದೇಶದಂತೆ ನಡೆದುಕೊಂಡೆ. ಇತ್ತೀಚೆಗೆ ಮತ್ತೆ ದೇವಸ್ಥಾನಕ್ಕೆ ಹೋಗಿದ್ದೆ. ಈ ಬಾರಿ ದೇವರು, ನಿನಗೆ ಏನು ಒಳ್ಳೆಯದೆಂದು ಅನಿಸುತ್ತೊ ಅದನ್ನು ಮಾಡುಎಂದು ಹೇಳಿದರು. ಹೀಗಾಗಿ, ನಾನು ಬಿಜೆಪಿ ಸೇರಿದೆ’ ಎಂಬ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್‌ ಮಾತುಗಳಿಗೆ ಧನ್ಯವಾದ ಹೇಳಲೇಬೇಕು. ದಿಗಂಬರ ಕಾಮತ್‌ ಅವರು ಈ ಅನೈತಿಕ ನಡೆಗೆ ದೇವರಿಂದ ನೈತಿಕ ಪ್ರತಿಕ್ರಿಯೆ ಹೇಗೆ ಪಡೆದರು? ಅವರು ದೇವರ ಜೊತೆ ಸಂಭಾಷಣೆ ನಡೆಸಲು ಹೇಗೆ ಸಾಧ್ಯವಾಯಿತು? ದೇವಸ್ಥಾನಕ್ಕೆ ಎರಡು ಬಾರಿ ಭೇಟಿ ನೀಡಿದಾಗಲೂ ದೇವರು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದು ಹೇಗೆ ಎನ್ನುವುದು ನನಗೆ ಅಚ್ಚರಿ ತಂದಿದೆ’ ಎಂದೂ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT