ADVERTISEMENT

ಲೈಂಗಿಕ ಕಿರುಕುಳ: ಬಿಬಿಎಂಪಿ ಮಹಿಳಾ ಅಧಿಕಾರಿ ದೂರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 21:08 IST
Last Updated 13 ಜುಲೈ 2020, 21:08 IST
   

ಬೆಂಗಳೂರು: ಗುತ್ತಿಗೆ ಬಿಲ್‌ನಲ್ಲಿ ಕಾರ್ಮಿಕರ ಇಎಸ್‌ಐ, ಪಿಎಫ್‌ ಹಾಗೂ ಜಿಎಸ್‌ಟಿ ಹಿಡಿದ ಕಾರಣಕ್ಕೆ ಮೂವರು ಗುತ್ತಿಗೆದಾರ ಸೋದರರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಮಹಿಳಾ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ.

ಗುತ್ತಿಗೆ ಬಿಲ್‌ಗಳನ್ನು ಪಾಸ್‌ ಮಾಡಿಸಿಕೊಂಡ ಗುತ್ತಿಗೆ ಸೋದರರು ತಮ್ಮ ಅಧೀನ ಕೆಲಸ ಮಾಡುವ ಕಾರ್ಮಿಕರ ಇಎಸ್‌ಐ, ಪಿಎಫ್‌ ಪಾವತಿ ಮಾಡಿಲ್ಲ. ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಕಟ್ಟಿರಲಿಲ್ಲ. ಆನಂತರದ ಬಿಲ್‌ಗಳಲ್ಲಿ ಇದನ್ನು ಕಡಿತ ಮಾಡಿಕೊಳ್ಳಲಾಯಿತು. ಇದಕ್ಕೆ ಆಕ್ಷೇಪಿಸಿದ ಮೂವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಅಧಿಕಾರಿ ಬಸವನಗುಡಿ ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಫೋಟೋಗಳನ್ನು ವಿಕಾರಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಫ್ರೇಜರ್ ಟೌನ್ ನಿವಾಸಿ, 37 ವರ್ಷದ ಮಹಿಳಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಗುತ್ತಿಗೆದಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಮಹಿಳೆ ಕೆಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದು, ಗುತ್ತಿಗೆದಾರರ ಪರಿಚಯವಾಗಿತ್ತು. ಆರೋಪಿಗಳು ಕೆಲಸದ ನಿಮಿತ್ತ ಆಗಾಗ ಕಚೇರಿಗೆ ಬಂದು ಹೋಗುತ್ತಿದ್ದರು. ಪರಿಚಿತರಂತೆ ನಡೆದುಕೊಂಡು ಹಲವು ಫೋಟೊಗಳನ್ನು ಮೊಬೈಲ್‌ನಲ್ಲಿ ತೆಗೆಸಿಕೊಂಡಿದ್ದರು. ಇದಾದ ನಂತರ ಆರೋಪಿಗಳು ಅಕ್ರಮ ಸಂಬಂಧದ ಕಥೆ ಕಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ. ಆ ಮೂಲಕ ತಮಗೆ ಲೈಂಗಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.