
ಪ್ರಜಾವಾಣಿ ವಾರ್ತೆ
ದಾಬಸ್ ಪೇಟೆ: ಹೊಸ ವರ್ಷದ ಪ್ರಯುಕ್ತ ಶಿವಗಂಗೆಗೆ ಹೆಚ್ಚಿನ ಭಕ್ತರು ಆಗಮಿಸಿದ್ದರು. ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ಮತ್ತು ಗಣೇಶ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಬೆಟ್ಟ ಏರುವುದಕ್ಕೆ ಜಿಲ್ಲಾಡಳಿತ ನಿಷೇಧ ಏರಿತ್ತು. ಇದರಿಂದ ಶಿವಗಂಗೆ ಬೆಟ್ಟ ಏರಲು ಹಾಗೂ ಇತರೆ ದೇವರುಗಳ ದರ್ಶನಕ್ಕೆ ಅವಕಾಶ ಇರಲಿಲ್ಲ. ಮುಂದಿನ ವರ್ಷವಾದರೂ ಇಲ್ಲಿ ನಿರ್ಭಂದವನ್ನು ಹಾಕದೆ ಭಕ್ತರಿಗೆ ಸಹಕಾರ ನೀಡುವ ವ್ಯವಸ್ಥೆ ಆಗಬೇಕು ಎಂಬುದು ಭಕ್ತರ ಅಹವಾಲಾಗಿತ್ತು.
ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ಸರತಿಯ ಸಾಲಿನಲ್ಲಿ ಬರಲು ವ್ಯವಸ್ಥೆ ಮಾಡಲಾಗಿತ್ತು. ಕೆಲ ಕಾಲ ನೂಕುನುಗ್ಗಲು ಉಂಟಾಗಿತ್ತು. ದೇವಾಲಯದ ಸಿಬ್ಬಂದಿ ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ದರುಶನಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.