ADVERTISEMENT

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆಗೆ ಪಿಪಿಪಿ ಮಾದರಿ

2030ರ ವೇಳೆಗೆ 1.79 ಕೋಟಿ ಜನಸಂಖ್ಯೆ; ನಿತ್ಯ ಎಂಟು ಸಾವಿರ ಟನ್ ಕಸ ಉತ್ಪಾದನೆ

ಆರ್. ಮಂಜುನಾಥ್
Published 18 ಜುಲೈ 2025, 0:25 IST
Last Updated 18 ಜುಲೈ 2025, 0:25 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ನಗರ ಜಿಲ್ಲೆಯಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆ ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಲ್‌) ನಿರ್ಧರಿಸಿದೆ.

ನಗರ ಜಿಲ್ಲೆಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಿ, ತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿ, ಸಂಸ್ಕರಣೆಯವರಿಗೆ ಎಲ್ಲ ಕಾರ್ಯವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತದೆ. ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ಮಾದರಿಯಲ್ಲಿ ಗುತ್ತಿಗೆ ಪಡೆದ ಸಂಸ್ಥೆ ಕಾರ್ಯನಿರ್ವಹಿಸಬೇಕಿದೆ.

ಸಮಗ್ರ ಘನತ್ಯಾಜ್ಯ ನಿರ್ವಹಣೆಗಾಗಿ ಈ ಹಿಂದೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗಿತ್ತು. ಅದನ್ನು ಬದಲಿಸಿ ಎರಡು ಪ್ಯಾಕೇಜ್‌ಗಳಲ್ಲಿ ಮರು ಟೆಂಡರ್ ಆಹ್ವಾನಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಬಾರಿ ಬಂಡವಾಳ ಹೂಡಿಕೆಯ ಅಂದಾಜು ಮೊತ್ತ ನಿರ್ಧರಿಸಿ, ಟಿಪ್ಪಿಂಗ್‌ ಆಧಾರದಲ್ಲಿ ವಿಲೇವಾರಿ– ಸಂಸ್ಕರಣೆ ಮಾಡಲು ಟೆಂಡರ್ ಆಹ್ವಾನಿಸಿದ್ದು, ಆಗಸ್ಟ್‌ 14ರವರೆಗೆ ಬಿಡ್‌ ಸಲ್ಲಿಸಲು ಅವಕಾಶ ನೀಡಲಾಗಿದೆ.

ADVERTISEMENT

ಸಮಗ್ರ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಪ್ರಕ್ರಿಯೆ ಈಗಿನ ಅಂದಾಜಿನಂತೆಯೇ ಪ್ರಾರಂಭವಾದರೆ, 2028ರ ವೇಳೆಗೆ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ. ನಂತರ ಘನತ್ಯಾಜ್ಯ ವಿಲೇವಾರಿ, ಸಂಸ್ಕರಣೆ ಕಾರ್ಯ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, 2030ರ ವೇಳೆಗೆ ಜನಸಂಖ್ಯೆಯನ್ನು ಅಂದಾಜಿಸಿ, ಘನತ್ಯಾಜ್ಯ ಉತ್ಪಾದನೆಯನ್ನು ಲೆಕ್ಕಾಚಾರ ಮಾಡಲಾಗಿದೆ.

ತ್ಯಾಜ್ಯದಿಂದ ಇಂಧನ, ಜೈವಿಕ ಇಂಧನ, ಗೊಬ್ಬರ, ಮರುಬಳಕೆಯ ವಸ್ತುಗಳು, ಉಪ–ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ಮಾರಾಟ ಮಾಡಿಕೊಳ್ಳಲು ಸಂಸ್ಥೆಗಳಿಗೆ ಅನುವು ಮಾಡಿಕೊಡಲಾಗಿದೆ.

ಉತ್ತರ ಪ್ಯಾಕೇಜ್‌ನಲ್ಲಿ ಒಟ್ಟಾರೆ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಈಗಿರುವ ಸಂಸ್ಕರಣೆ ಘಟಕಗಳು ನಿತ್ಯ 976 ಟನ್‌ ಅನ್ನು ಸಂಸ್ಕರಿಸುತ್ತಿವೆ. ಉಳಿದ 3,822 ಟನ್‌ ಅನ್ನು ನಿತ್ಯವೂ ಸಂಸ್ಕರಿಸಲು ಕ್ರಮ ಕೈಗೊಳ್ಳಬೇಕು. ದಕ್ಷಿಣ ಪ್ಯಾಕೇಜ್‌ನಲ್ಲಿ 1,113 ಟನ್‌ ನಿತ್ಯ ಸಂಸ್ಕರಣೆಯಾಗುತ್ತಿದ್ದು, ಉಳಿದ 3,900 ಟನ್‌ ಸಂಸ್ಕರಣೆಗೆ ಮೂಲಸೌಕರ್ಯ ನಿರ್ಮಾಣ ಹಾಗೂ ಕಾರ್ಯನಿರ್ವಹಣೆಯಾಗಬೇಕು ಎಂದು ಟೆಂಡರ್‌ನಲ್ಲಿ ವಿವರಿಸಲಾಗಿದೆ.

ಪ್ರತಿ ವ್ಯಕ್ತಿಯಿಂದ 400 ಗ್ರಾಂ ತ್ಯಾಜ್ಯ

ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯ 2160 ಚದರ ಕಿ.ಮೀ ವ್ಯಾಪ್ತಿಯಲ್ಲಿ 2030ರ ವೇಳೆಗೆ ನಗರದಲ್ಲಿರುವ ಪ್ರತಿ ವ್ಯಕ್ತಿಯಿಂದ ನಿತ್ಯ 400 ಗ್ರಾಂ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಫ್ಲೋಟಿಂಗ್‌ ಜನಸಂಖ್ಯೆಯಲ್ಲಿ ಪ್ರತಿ ವ್ಯಕ್ತಿಗೆ 100 ಗ್ರಾಂ ತ್ಯಾಜ್ಯ ನಿತ್ಯ ಉತ್ಪಾದನೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಬಲ್ಕ್‌ ತ್ಯಾಜ್ಯವನ್ನು ಹೊರತುಪಡಿಸಿ ಸುಮಾರು 7290 ಟನ್‌ ತ್ಯಾಜ್ಯ ಪ್ರತಿನಿತ್ಯ ಉತ್ಪಾದನೆಯಾಗುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿದೆ. 

ತ್ಯಾಜ್ಯ ಸಂಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.