ADVERTISEMENT

ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 16:27 IST
Last Updated 1 ಏಪ್ರಿಲ್ 2024, 16:27 IST
ತಾಪಮಾನ
ತಾಪಮಾನ   

ಬೆಂಗಳೂರು: ನಗರದಲ್ಲಿ ಬಿಸಿಲ ಪ್ರಕೋಪ ಮುಂದುವರಿದಿದ್ದು ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಜನರು ಹೊರಬರುವುದಕ್ಕೂ ಭಯ ಪಡುತ್ತಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಸಿ ಎನಿಸುತ್ತಿದೆ.

ಮಧ್ಯಾಹ್ನದ ವೇಳೆಯಲ್ಲಿ ಓಡಾಡಿದರೆ ತಲೆಸುತ್ತು ಕಾಣಿಸಿಕೊಳ್ಳುತ್ತಿದೆ ಎಂದು ವೃದ್ಧರು ಹಾಗೂ ಮಕ್ಕಳು ಹೇಳುತ್ತಿದ್ದಾರೆ.

ಕಾಂಕ್ರಿಟ್‌ ಹಾಗೂ ಡಾಂಬರ್‌ ರಸ್ತೆಗಳು ಕಾವಲಿಯಂತೆ ಸುಡುತ್ತಿವೆ. ಜನರು ದಾಹ ನೀಗಿಸಿಕೊಳ್ಳಲು ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ.

ನಗರದ ಎಚ್‌ಎಎಲ್‌ನಲ್ಲಿ ಸೋಮವಾರ ಗರಿಷ್ಠ ಉಷ್ಣಾಂಶ 35.4, ಕೆಐಎಎಲ್‌ನಲ್ಲಿ 36.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಮುಂದಿನ ಎರಡು ದಿನಗಳ ಕಾಲ ಗರಿಷ್ಠ ಉಷ್ಣಾಂಶವು 36 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.