ADVERTISEMENT

ತಬ್ಲೀಗ್‌ ಜಮಾತ್ ಸದಸ್ಯರಿಗೆ ಶಿಕ್ಷೆ, ಬಿಡುಗಡೆ

ವೀಸಾ ನಿಯಮ ಉಲ್ಲಂಘಿಸಿ ಧರ್ಮ ಪ್ರಚಾರ; ತಪ್ಪೊಪ್ಪಿಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 18:53 IST
Last Updated 25 ಜೂನ್ 2020, 18:53 IST
ತಬ್ಲೀಗ್ ಜಮಾತ್ ಸದಸ್ಯರು- ಸಾಂದರ್ಭಿಕ ಚಿತ್ರ
ತಬ್ಲೀಗ್ ಜಮಾತ್ ಸದಸ್ಯರು- ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರವಾಸಿ ವೀಸಾದಡಿ ದೇಶಕ್ಕೆ ಬಂದು ಧರ್ಮ ಪ್ರಚಾರ ಮಾಡಿ ನಿಯಮ ಉಲ್ಲಂಘಿಸಿದ್ದ ಆರೋ‍ಪದಡಿ ಬಂಧಿಸಲಾಗಿದ್ದ ಐವರು ತಬ್ಲೀಗ್‌ ಜಮಾತ್ ಸದಸ್ಯರಿಗೆ ನಗರದ 30ನೇ ಎಸಿಎಂಎಂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿದ್ದರು. ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣದ ಬಗ್ಗೆ ಆರೋಪಿಗಳು ತಪ್ಪೊಪ್ಪಿಗೆ ನೀಡಿದರು. ಅದನ್ನು ಮನ್ನಿಸಿದ ನ್ಯಾಯಾಲಯ, ಆರೋಪಿಗಳಿಗೆ 27 ದಿನಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಆರೋಪಿಗಳು ಈಗಾಗಲೇ 27 ದಿನ ನ್ಯಾಯಾಂಗ ಬಂಧನ ಪೂರೈಸಿದ್ದಾರೆ. ಶಿಕ್ಷೆ ಪ್ರಮಾಣ ಮುಕ್ತಾಯವಾಗಿರುವುದರಿಂದ ಅವರನ್ನು ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ಹೇಳಿದೆ.

ADVERTISEMENT

ಪ್ರರಣದ ವಿವರ:ಪ್ರವಾಸಿ ವೀಸಾ ಪಡೆದಿದ್ದ ಇಂಗ್ಲೆಂಡ್, ಫ್ರಾನ್ಸ್, ಕೀನ್ಯಾದ ತಲಾ ಒಬ್ಬರು ಹಾಗೂ ಕಜಕಿಸ್ತಾನ್‌ನ ಇಬ್ಬರು, ತಬ್ಲೀಗ್‌ ಜಮಾತ್‌ನಲ್ಲಿ ಪಾಲ್ಗೊಂಡಿದ್ದರು. ನಂತರ ಬೆಂಗಳೂರಿಗೆ ಬಂದು ಧರ್ಮ ಪ್ರಚಾರ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.