ಬೆಂಗಳೂರು: ಹೆಜ್ಜಾಲದ ಜಡೇನಹಳ್ಳಿ ಬಳಿ ಇರುವ ವಂಡರ್ ಲಾದಲ್ಲಿ ‘ದಿ ಐಲ್ ಬೈ ವಂಡರ್ ಲಾ’ ಹೊಸ ರಿಟ್ರೀಟ್ ಮತ್ತು ಸ್ಟೇ ಗಳನ್ನು ಶುಕ್ರವಾರ ಆರಂಭಿಸಲಾಗಿದೆ.
4.5 ಎಕರೆ ಪ್ರದೇಶದಲ್ಲಿ ರೆಸಾರ್ಟ್, ಪ್ರತ್ಯೇಕ ಈಜುಕೊಳಗಳಿರುವ ಕಾಟೇಜ್, ಕ್ಯಾಂಪಿಂಗ್ ಟೆಂಟ್, ಹ್ಯಾಮಕ್ ಸ್ವೀಟ್ಸ್ ಮತ್ತು ಟ್ರೀಹೌಸ್, ಲಗೂನ್ ವ್ಯೂ ಡೆಕ್ ಸೇರಿ 39 ಇವೆ. ಜೊತೆಗೆ ಐಶಾರಾಮಿ ಸ್ಪಾ, ಸಾಕುಪ್ರಾಣಿಗಳನ್ನು ಕರೆದುಕೊಂಡು ಬರುವುದಕ್ಕೂ ಅನುಕೂಲ ಮಾಡಿಕೊಡುವುದಕ್ಕಾಗಿ ಪ್ರತ್ಯೇಕ ಪ್ರದೇಶವನ್ನು ಮೀಸಲಿಡಲಾಗಿದೆ ಎಂದು ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿತ್ತಿಲಪ್ಪಿಳ್ಳಿ ವಿವರಿಸಿದರು.
62 ಆಸನಗಳನ್ನು ಹೊಂದಿರುವ ಆಕರ್ಷಕ ರೆಸ್ಟೋರಂಟ್ ಹೊಂದಿದ್ದು, ಏಷ್ಯಾ ಖಂಡದಲ್ಲಿ ಇರುವ ವಿವಿಧ ವಿಶಿಷ್ಟ ಖಾದ್ಯಗಳು ಗ್ರಾಹಕರಿಗೆ ಇಲ್ಲಿ ಲಭ್ಯವಾಗಲಿವೆ ಎಂದು ಹೇಳಿದರು.
ವಂಡರ್ ಲಾ ಆರಂಭವಾಗಿ 25 ವರ್ಷಗಳಾಗಿವೆ. ಇಲ್ಲಿನ ಪಾರ್ಕ್‌ಗಳು ಮನರಂಜನೆಗೆ ಹೆಸರುವಾಸಿಯಾಗಿದ್ದರೂ, ಹೆಚ್ಚು ವೈಯಕ್ತಿಕವಾಗಿರುವ ಪ್ರಾಕೃತಿಕ ಅನುಭವಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಅದಕ್ಕಾಗಿಯೇ ‘ದಿ ಐಲ್’ ಆರಂಭಿಸಲಾಗಿದೆ ಎಂದರು.
ವಂಡರ್ ಲಾ ಹಾಲಿಡೇಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರನ್ ಚೌಧರಿ ಮಾತನಾಡಿ, ‘ಅತಿಥಿಗಳ ನಿರೀಕ್ಷೆಗಳಿಗೆ ತಕ್ಕಂತೆ ಬೆಂಗಳೂರಿಗೆ ಹತ್ತಿರದಲ್ಲಿಯೇ ಪ್ರಾಕೃತಿಕ ಸ್ಟೇ ಸೃಷ್ಟಿ ಮಾಡಿದ್ದೇವೆ. ಖಾಸಗಿ ಪ್ಲಂಜ್ ಪೂಲ್ ಬಳಿ ಅಡ್ಡಾಡಲು, ಸ್ಕೈಲೈಟ್ಸ್ ಕೊಠಡಿ ಮೂಲಕ ನಕ್ಷತ್ರಗಳನ್ನು ವೀಕ್ಷಣೆ ಮಾಡಲು, ಟ್ರೀ ಹೌಸ್‌ನಲ್ಲಿ ಸೂರ್ಯಾಸ್ತವನ್ನು ನೋಡಲು ಅವಕಾಶ ಮಾಡಿಕೊಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಶಿಬಿರಾಗ್ನಿ (ಕ್ಯಾಂಪ್ ಫೈರ್) ಮಾಡಬಹುದು’ ಎಂದು ಮಾಹಿತಿ ನೀಡಿದರು.
ಕೊಠಡಿಗಳಿಗೆ ದಿನಕ್ಕೆ ₹ 10 ಸಾವಿರದಿಂದ ₹ 15 ಸಾವಿರವರೆಗೆ ದರ ನಿಗದಿಪಡಿಸಲಾಗಿದೆ. https://www.wonderla.com/theisle ಅಥವಾ 7026500011, 8035073992 ಮೂಲಕ ಮುಂಚಿತವಾಗಿ ಕಾಯ್ದಿರಿಸಬಹುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.