ADVERTISEMENT

ಮಿಥಿಕ್ ಸೊಸೈಟಿ ಅಧ್ಯಕ್ಷರಾಗಿ ವಿ. ನಾಗರಾಜ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:48 IST
Last Updated 31 ಡಿಸೆಂಬರ್ 2023, 15:48 IST
ವಿ. ನಾಗರಾಜ್
ವಿ. ನಾಗರಾಜ್   

ಬೆಂಗಳೂರು: ದಿ ಮಿಥಿಕ್ ಸೊಸೈಟಿಯ ಸರ್ವಸದಸ್ಯರ ಸಭೆ ಮತ್ತು ಚುನಾವಣೆ ಭಾನುವಾರ ನಡೆದಿದ್ದು, ನೂತನ ಅಧ್ಯಕ್ಷರಾಗಿ ವಿ. ನಾಗರಾಜ್ ಆಯ್ಕೆಯಾಗಿದ್ದಾರೆ. 

ಗೌರವ ಕಾರ್ಯದರ್ಶಿಯಾಗಿ ಎಸ್. ರವಿ, ಉಪಾಧ್ಯಕ್ಷರಾಗಿ, ವಿ. ಅನುರಾಧ ಹಾಗೂ ಗೌರವ ಕೋಶಾಧ್ಯಕ್ಷರಾಗಿ ಕೆ.ಎನ್. ಹಿರಿಯಣ್ಣಯ್ಯ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ಸದಸ್ಯರಾಗಿ ತಿಪ್ಪೇಸ್ವಾಮಿ ಎನ್., ಎಂ.ಆರ್. ಪ್ರಸನ್ನ ಕುಮಾರ್, ಎಂ. ಕೊಟ್ರೇಶ್, ಸುದರ್ಶನ್ ಎಸ್., ಎಂ.ಜಿ. ಚಂದ್ರಕಾಂತ್, ಎಸ್. ನರಹರಿ ರಾವ್, ಕೆ.ಎಸ್. ಶ್ರೀಧರ ಹಾಗೂ ಮಾಧವರಾವ್ ಕೆ. ಹೆಬ್ಬಾರ್ ಅವರು ಆಯ್ಕೆಯಾಗಿದ್ದಾರೆ. 

ದಿ ಮಿಥಿಕ್ ಸೊಸೈಟಿಯು ಇತಿಹಾಸ ಹಾಗೂ ಪುರಾತತ್ವಶಾಸ್ತ್ರದ ಸಂಶೋಧನೆಯಲ್ಲಿ ಸಕ್ರಿಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.